varthabharthi


ಓ ಮೆಣಸೇ

ಓ ಮೆಣಸೇ ...

ವಾರ್ತಾ ಭಾರತಿ : 17 Nov, 2019
ಪಿ.ಎ.ರೈ

ಉಪಚುನಾವಣೆಯಲ್ಲಿ ಬಿಜೆಪಿಯಿಂದ ಕಲ್ಲನ್ನು ಅಭ್ಯರ್ಥಿಯನ್ನಾಗಿ ನಿಲ್ಲಿಸಿದರೂ ಗೆಲ್ಲುತ್ತೆ - ಸುರೇಶ್ ಅಂಗಡಿ, ಕೇಂದ್ರ ಸಚಿವ
ಸದ್ಯಕ್ಕೆ ಕಲ್ಲುಗಳ ಬದಲು ಅನರ್ಹ ಕತ್ತೆಗಳನ್ನು ನಿಲ್ಲಿಸಲಾಗಿದೆ.

---------------------

ಯಡಿಯೂರಪ್ಪ ನನಗೆ ಮುಖ್ಯಮಂತ್ರಿ ಸ್ಥಾನ ಕೊಟ್ಟರೂ ಮತ್ತೆ ಬಿಜೆಪಿಗೆ ಹೋಗೊಲ್ಲ - ರಾಜುಕಾಗೆ, ಮಾಜಿ ಸಚಿವ
   ಚುನಾವಣೆಗೆ ನಿಲ್ಲಲು ಟಿಕೆಟ್ ಕೊಡದವರು ಮುಖ್ಯಮಂತ್ರಿ ಸ್ಥಾನ ಕೊಡುತ್ತಾರೆಯೇ?
---------------------
 ಮಹಾರಾಷ್ಟ್ರ ಚುನಾವಣೆಯಲ್ಲಿ ಶಿವಸೇನೆಗೆ 56 ಸ್ಥಾನ ದೊರೆಯಲು ಪ್ರಧಾನಿ ಮೋದಿಯೂ ಕಾರಣ - ಪ್ರಹ್ಲಾದ್ ಜೋಷಿ, ಕೇಂದ್ರ ಸಚಿವ

   ಬಹುಶಃ ಪ್ರಧಾನಿ ಮೋದಿಯಲ್ಲದೇ ಇದ್ದರೆ ಅದಕ್ಕಿಂತಜಾಸ್ತಿ ಸಿಗುತ್ತಿತ್ತು ಎಂಬ ಅಭಿಪ್ರಾಯ ಇರಬೇಕು.

---------------------

ಮುಖ್ಯಮಂತ್ರಿ ಯಡಿಯೂರಪ್ಪ ಹಸುವಲ್ಲ, ಹೋರಿ - ಆಯನೂರು ಮಂಜುನಾಥ್, ವಿ.ಪ. ಸದಸ್ಯ
  ರೇಣುಕಾಚಾರ್ಯರಿಗೆ ಗುದ್ದಿದ ಹೋರಿಯಲ್ಲ ತಾನೇ?

---------------------
ನಮ್ಮದು ಸಿದ್ಧ್ದಾಂತ ಇಟ್ಟುಕೊಂಡಿರುವ ಪಕ್ಷ - ಸಿ.ಟಿ.ರವಿ, ಸಚಿವ
ಸಿದ್ಧಾಂತ ಇಟ್ಟುಕೊಂಡ ಕಾರಣಕ್ಕೆ, ಫುಟ್‌ಪಾತ್‌ನಲ್ಲಿರುವ ಅಮಾಯಕರ ಮೇಲೆ ಕಾರು ಹರಿಸಬಹುದೇ?

---------------------

ಹಣೆಗೆ ಹಚ್ಚುವ ಕುಂಕುಮ ರಾಸಾಯನಿಕ ಮಿಶ್ರಣವಾಗಿದ್ದರೆ ಅಂಥದ್ದನ್ನು ನಿಷೇಧ ಮಾಡಲಾಗುವುದು - ಕೋಟ ಶ್ರೀನಿವಾಸ ಪೂಜಾರಿ, ಸಚಿವ
ಕುಡಿಯುವ ನೀರಿನಲ್ಲಿ ರಾಸಾಯನಿಕ ಮಿಶ್ರಣವಾಗಿರುವುದರ ಬಗ್ಗೆ ಯಾವಾಗ ಮಾತನಾಡುತ್ತೀರಿ?

---------------------
 

ನನ್ನ ಶಕ್ತಿ ಕುಂದಿಲ್ಲ, ಆದರೆ ನಮ್ಮ ಪಕ್ಷದ ಶಕ್ತಿ ಕುಂದಿದೆ - ಎಚ್.ಡಿ.ದೇವೇಗೌಡ, ಮಾಜಿ ಪ್ರಧಾನಿ

ಬಿಜೆಪಿಯಿಂದ ಶಕ್ತಿ ಮದ್ದು ಕುಡಿಯಿರಿ, ಶಕ್ತಿ ಹೆಚ್ಚಿಸಿಕೊಳ್ಳಿ.

---------------------
 ನನ್ನನ್ನು ಕಂಡಾಗಲೆಲ್ಲಾ ‘ಜನುಮ ನೀಡುತ್ತಾಳೆ ನಮ್ಮ ತಾಯಿ’ ಎಂದು ದಿ.ಅನಂತ ಕುಮಾರ್ ಹಾಡುತ್ತಿದ್ದರು - ಜಗ್ಗೇಶ್, ನಟ

ಬಹುಶಃ ನೀವು ಕಳ್ಳೆಕಾಯಿ ಮಾರ್ತಾ ಇದ್ದ ಕಾಲದಲ್ಲಿರಬೇಕು.

---------------------
  
ಶಿವಸೇನೆಯನ್ನು ಹುಟ್ಟು ಹಾಕಿದ್ದ ಬಾಳಾ ಠಾಕ್ರೆಯ ಆಶಯವೇ ಈಗ ಮಣ್ಣು ಪಾಲಾಗುತ್ತಿದೆ - ಶೋಭಾ ಕರಂದ್ಲಾಜೆ, ಸಂಸದೆ
   ಬಿಜೆಪಿಯ ನಾಯಕರನ್ನು ಮುಖ್ಯಮಂತ್ರಿ ಮಾಡುವುದು ಅವರ ಆಶಯವಾಗಿತ್ತೇ?

---------------------
  
ನಾನು ಅನರ್ಹತೆ ವ್ಯಾಪ್ತಿಗೆ ಬರುವುದಿಲ್ಲ - ಡಾ.ಸುಧಾಕರ್, ಅನರ್ಹ ಶಾಸಕ
   ಅನರ್ಹರಲ್ಲದವರಿಗೆ ಸಚಿವ ಸ್ಥಾನ ಇಲ್ಲವಂತೆ.

---------------------
  
ಭಾರತ, ಚೀನಾ ತ್ಯಾಜ್ಯದಿಂದ ಅಮೆರಿಕಕ್ಕೆ ತೊಂದರೆಯಾಗುತ್ತಿದೆ - ಡೊನಾಲ್ಡ್ ಟ್ರಂಪ್, ಅಮೆರಿಕ ಅಧ್ಯಕ್ಷ   
ನಿಮ್ಮ ಬಾಯಿಯಿಂದ ಹೊರಡುತ್ತಿರುವ ತ್ಯಾಜ್ಯ ವಿಶ್ವಕ್ಕೇ ತೊಂದರೆ ನೀಡುತ್ತಿದೆ.

---------------------
  
ಅನರ್ಹ ಶಾಸಕರ ಬಗ್ಗೆ ಸುಪ್ರೀಂ ಕೋರ್ಟ್ ತೀರ್ಪು ಬಂದ ಬಳಿಕ ಯಡಿಯೂರಪ್ಪರ ಸರಕಾರ ಇನ್ನಷ್ಟು ಭದ್ರವಾಗಿದೆ - ಎಚ್.ಡಿ.ದೇವೇಗೌಡ, ಮಾಜಿ ಪ್ರಧಾನಿ   
ತಮ್ಮ ಮಗನನ್ನು ಅನರ್ಹಗೊಳಿಸಲು ತುದಿಗಾಲಲ್ಲಿ ನಿಂತಂತಿದೆ.

---------------------
  
ಕನ್ನಡ ಭಾಷಾ ಬೋಧನೆಗೆ ನಿರ್ಲಕ್ಷ ತೋರುತ್ತಿರುವ ಶಾಲೆಗಳ ಮಾನ್ಯತೆ ರದ್ದು ಗೊಳಿಸಲಾಗುವುದು - ಸುರೇಶ್‌ಕುಮಾರ್, ಸಚಿವ
   ಹಿಂದಿ ಭಾಷೆ ಬೋಧನೆಗೆ ಆಸಕ್ತಿ ತೋರುತ್ತಿರುವವರ ವಿರುದ್ಧ ಯಾವಾಗ ಕ್ರಮ?

---------------------

  
ಅನರ್ಹ ಶಾಸಕರಿಗೆ ಮೋಸವಾಗದಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ - ಆರ್.ಅಶೋಕ್, ಸಚಿವ
  ಮೋಸ ಮಾಡಿದವರಿಗೆ ಮೋಸವಾಗಬಾರದು ಎಂಬುದು ನಿಮ್ಮ ಸಿದ್ಧಾಂತವಿರಬೇಕು.

---------------------
  
ನನಗೆ ಎಲ್ಲ ಪಕ್ಷಗಳ ಹಣೆಬರಹ ಗೊತ್ತಿದೆ - ಎಚ್.ಡಿ.ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ  
ತಮ್ಮ ಪಕ್ಷದ ಹಣೆಬರಹವನ್ನೊಮ್ಮೆ ಹೇಳಿ ಬಿಡಿ.

---------------------
  
ನಾನು ಶೀಘ್ರದಲ್ಲೇ ಮಂತ್ರಿಯಾಗಲಿದ್ದೇನೆ - ಬಸನಗೌಡ ಪಾಟೀಲ ಯತ್ನಾಳ್, ಶಾಸಕ   
ಅದಕ್ಕೂ ಮೊದಲು ಅನರ್ಹರೆಂದು ಗುರುತಿಸಿಕೊಳ್ಳಬೇಕಾಗುತ್ತದೆ.

---------------------
  
ಕಾಶ್ಮೀರದ ಭಯೋತ್ಪಾದಕರು ಪಾಕಿಸ್ತಾನದ ಹೀರೋಗಳು - ಪರ್ವೇಝ್ ಮುಶರ್ರಫ್, ಪಾಕ್ ಮಾಜಿ ಅಧ್ಯಕ್ಷ  
ಆ ಹೀರೋಗಳಿಂದಲೇ ಪಾಕಿಸ್ತಾನಕ್ಕೆ ಈ ಗತಿ ಬಂದಿರುವುದು.

---------------------
 
ಅನರ್ಹ ಶಾಸಕರು ಬಿಜೆಪಿಗೆ ಸೇರುವ ಇಂದು ಐತಿಹಾಸಿಕ ದಿನ - ಯಡಿಯೂರಪ್ಪ, ಮುಖ್ಯಮಂತ್ರಿ   
ಅನರ್ಹರೇ ಬಿಜೆಪಿಯ ಹೆಮ್ಮೆ ಎಂದು ಘೋಷಿಸಿ.

---------------------
  
ರಾಜ್ಯದ ಅಭಿವೃದ್ಧಿಗೆ ಯಡಿಯೂರಪ್ಪ ಅವರೊಂದಿಗೆ ಭುಜಕ್ಕೆ ಭುಜ ಕೊಟ್ಟು ಕೆಲಸ ಮಾಡಲಾಗುವುದು - ಎಚ್.ವಿಶ್ವನಾಥ್, ಅನರ್ಹ ಶಾಸಕ
ದೇವೇಗೌಡರ ಜೊತೆಗೆ ಕೆಲಸ ಮಾಡಿದಂತೆ?

---------------------
  

ಭಾರತದಲ್ಲಿ ಈಗ ಹಿಂದೆಂದೂ ಕಾಣದ ರಾಜಕೀಯ ಸ್ಥಿರತೆ ಇದೆ - ನರೇಂದ್ರ ಮೋದಿ, ಪ್ರಧಾನಿ
   ಆರ್ಥಿಕ ಸ್ಥಿರತೆಯ ಬಗ್ಗೆ ಏನಂತೀರಿ?

---------------------
  
ಜನ ಮದುವೆಯಾಗುತ್ತಿದ್ದಾರೆ. ವಿಮಾನ ನಿಲ್ದಾಣ, ರೈಲುಗಳು ತುಂಬಿ ತುಳುಕುತ್ತಿವೆ. ಇವೆಲ್ಲವೂ ದೇಶದ ಆರ್ಥಿಕತೆ ಚೆನ್ನಾಗಿದೆ ಅನ್ನುವುದರ ಸೂಚಕ - ಸುರೇಶ್ ಅಂಗಡಿ, ಕೆಂದ್ರ ಸಚಿವ   
ಹೆಚ್ಚು ಹೆಚ್ಚು ಮದುವೆಯಾದಷ್ಟೂ ದೇಶದ ಆರ್ಥಿಕತೆ ಹೆಚ್ಚುತ್ತದೆ ಎನ್ನುವ ಅಭಿಪ್ರಾಯ ಇರಬೇಕು.

---------------------
  
ನೀವು 5 ರಿಂದ 7 ಕಿಲೋ ತೂಕ ಕಡಿಮೆ ಮಾಡಿಕೊಳ್ಳ ಬೇಕೇ ಉಚಿತ ಯೋಗ ಶಿಬಿರದಲ್ಲಿ ಭಾಗವಹಿಸಿ - ಬಾಬಾ ರಾಮ್‌ದೇವ್, ಯೋಗ ಗುರು  
ವರ್ಚಸ್ಸಿನ ತೂಕವಂತೂ ಕಡಿಮೆಯಾಗುವುದರಲ್ಲಿ ಅನುಮಾನವಿಲ್ಲ.

---------------------
ದೇಶದ ಇತಿಹಾಸಕಾರರು ಸಾವರ್ಕರ್ ಬಗ್ಗೆ ಸರಿಯಾದ ರೀತಿಯಲ್ಲಿ ಅಧ್ಯಯನ ನಡೆಸಿಲ್ಲ - ವೆಂಕಯ್ಯ ನಾಯ್ಡು, ಉಪ ರಾಷ್ಟ್ರಪತಿ
  ಯಾವುದಾದರೂ ಭೂಪ್ರದೇಶವನ್ನು ಅಗೆದು ಅವರ ಇತಿಹಾಸವನ್ನು ತಕ್ಷಣ ಹುಡುಕಬೇಕಾಗಿದೆ

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)

ಇನ್ನಷ್ಟು ಓ ಮೆಣಸೇ ಸುದ್ದಿಗಳು