varthabharthi


ರಾಷ್ಟ್ರೀಯ

ಸುಪ್ರೀಂ ಕೋರ್ಟ್ 47ನೇ ಮುಖ್ಯ ನ್ಯಾಯಾಧೀಶರಾಗಿ ಜಸ್ಟಿಸ್ ಎಸ್‌ಎ ಬೋಬ್ಡೆ ಪ್ರಮಾಣವಚನ

ವಾರ್ತಾ ಭಾರತಿ : 18 Nov, 2019

ಹೊಸದಿಲ್ಲಿ, ನ.18: ಜಸ್ಟಿಸ್ ಶರದ್ ಅರವಿಂದ್ ಬೋಬ್ಡೆ ಸುಪ್ರೀಂಕೋರ್ಟ್‌ನ 47ನೇ ಮುಖ್ಯ ನ್ಯಾಯಾಧೀಶರಾಗಿ ಸೋಮವಾರ ಪ್ರಮಾಣವಚನ ಸ್ವೀಕರಿಸಿದರು. ರಾಷ್ಟ್ರಪತಿ ರಾಮನಾಥ ಕೋವಿಂದ್ ಬೋಬ್ಡೆ ಅವರಿಗೆ ಪ್ರಮಾಣವಚನ ಬೋಧಿಸಿದರು.

63ರ ವಯಸ್ಸಿನ ಬೋಬ್ಡೆ ಜಸ್ಟಿಸ್ ರಂಜನ್ ಗೊಗೊಯ್ ಉತ್ತರಾಧಿಕಾರಿಯಾಗಿ ಆಯ್ಕೆಯಾಗಿದ್ದಾರೆ. ಗೊಗೊಯ್ ಅವರ ಅಧಿಕಾರದ ಅವಧಿಯು ರವಿವಾರ ಅಂತ್ಯವಾಗಿದೆ.

 ಮುಖ್ಯ ನ್ಯಾಯಮೂರ್ತಿ ಬೋಬ್ಡೆ ಅವರು ಸುಮಾರು 17 ತಿಂಗಳ ಕಾಲ ಸುಪ್ರೀಂಕೋರ್ಟ್ ನಲ್ಲಿ ಸಿಜೆಐ ಆಗಿ ಕಾರ್ಯನಿರ್ವಹಿಸಲಿದ್ದಾರೆ. ಮಹಾರಾಷ್ಟ್ರ ಮೂಲದ ನ್ಯಾಯಾಧೀಶರಾದ ಬೋಬ್ಡೆ 2021ರ ಎಪ್ರಿಲ್ 23ರಂದು ಸೇವೆಯಿಂದ ನಿವೃತ್ತಿಯಾಗಲಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)