varthabharthi


ಸಿನಿಮಾ

ಬಾಲಿವುಡ್ ಗಾಯಕಿ ಕನಿಕಾ ಕಪೂರ್ ಗೆ ಕೊರೊನಾವೈರಸ್ ಸೋಂಕು

ವಾರ್ತಾ ಭಾರತಿ : 20 Mar, 2020

ಹೊಸದಿಲ್ಲಿ: ಇತ್ತೀಚೆಗಷ್ಟೇ ಇಂಗ್ಲೆಂಡ್ ಪ್ರವಾಸದಿಂದ ಭಾರತಕ್ಕೆ ವಾಪಸಾದ ಗಾಯಕಿ ಕನಿಕಾ ಕಪೂರ್ ಅವರಿಗೆ ಕೊರೊನಾವೈರಸ್ ಇರುವುದು ದೃಢಪಟ್ಟಿದೆ.  ಈ ಕುರಿತಾದ ಮಾಹಿತಿಯನ್ನು 41 ವರ್ಷದ ಗಾಯಕಿ ತಮ್ಮ ಸಾಮಾಜಿಕ ಜಾಲತಾಣ ಖಾತೆಗಳಲ್ಲಿ ಹೇಳಿಕೊಂಡಿದ್ದಾರೆ.

"ಕಳೆದ ನಾಲ್ಕು ದಿನಗಳಲ್ಲಿ ನನಗೆ ಫ್ಲೂ ಲಕ್ಷಣಗಳಿದ್ದವು. ಪರೀಕ್ಷಾ ವರದಿ ಕೋವಿಡ್-19 ಸೋಂಕು ದೃಢಪಡಿಸಿದೆ. ನಾನು ಹಾಗೂ ನನ್ನ ಕುಟುಂಬ ಸಂಪೂರ್ಣ ಕ್ವಾರಂಟೈನ್‍ ನಲ್ಲಿದ್ದೇವೆ ಹಾಗೂ ವೈದ್ಯರ ಸಲಹೆಯಂತೆ ನಡೆದುಕೊಳ್ಳುತ್ತಿದ್ದೇವೆ. ನಾನು ಸಂಪರ್ಕಕ್ಕೆ ಬಂದ ಜನರ ಕುರಿತು ಅಧಿಕಾರಿಗಳು ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಹತ್ತು ದಿನಗಳ ಹಿಂದೆ ವಿಮಾನ ನಿಲ್ದಾಣದಲ್ಲಿ ಸ್ಕ್ರೀನಿಂಗ್‍ ಗೊಳಗಾಗಿದ್ದಾಗ ಯಾವುದೇ ನೆಗಡಿಯ ಲಕ್ಷಣಗಳಿರಲಿಲ್ಲ, ಆದರೆ ನಾಲ್ಕು ದಿನಗಳ ಹಿಂದೆ ಲಕ್ಷಣಗಳು ಕಾಣಿಸಿಕೊಂಡಿದ್ದವು'' ಎಂದು ಅವರು ಬರೆದುಕೊಂಡಿದ್ದಾರಲ್ಲದೆ ಎಲ್ಲರೂ ಆದಷ್ಟು ಸ್ವಯಂ ದಿಗ್ಬಂಧನದಲ್ಲಿರಬೇಕು ಹಾಗೂ ಕೊರೊನಾ ಲಕ್ಷಣಗಳು ಕಾಣಿಸಿಕೊಂಡ ಕೂಡಲೇ ಪರೀಕ್ಷೆಗೊಳಪಡಬೇಕು ಎಂದು ಬರೆದಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)