varthabharthi


ಕ್ರೀಡೆ

ಕೊರೋನವೈರಸ್: ತನ್ನ 4 ಅಂತಸ್ತಿನ ಕಟ್ಟಡವನ್ನು ಆರೋಗ್ಯ ಇಲಾಖೆಗೆ ನೀಡುತ್ತೇನೆಂದ ಬಾಕ್ಸರ್ ಆಮಿರ್ ಖಾನ್

ವಾರ್ತಾ ಭಾರತಿ : 26 Mar, 2020

ಲಂಡನ್: ಇಂಗ್ಲೆಂಡ್‍ ನ ವೃತ್ತಿಪರ ಬಾಕ್ಸರ್ ಆಮಿರ್ ಖಾನ್ ತಮ್ಮ ದೇಶದಲ್ಲಿ ಕೊರೋನ ವೈರಸ್ ವಿರುದ್ಧದ ಹೋರಾಟಕ್ಕೆ ಸಹಾಯ ಮಾಡಲು ಮುಂದೆ ಬಂದಿದ್ದಾರೆ. ತಮ್ಮ ಒಡೆತನದ 60,000 ಚದರ ಅಡಿಯ ನಾಲ್ಕಂತಸ್ತಿನ ಕಟ್ಟಡವನ್ನು ಆರೋಗ್ಯ ಇಲಾಖೆಗೆ ನೀಡಲು ಸಿದ್ಧರಿರುವುದಾಗಿ ಅವರು ಟ್ವೀಟ್ ಮಾಡಿದ್ದಾರೆ. ಅವರ ಈ ಕಟ್ಟಡದಲ್ಲಿ ಮದುವೆ ಹಾಲ್ ಹಾಗೂ ರಿಟೇಲ್ ಮಳಿಗೆ ತೆರೆಯುವ ಉದ್ದೇಶವಿತ್ತು.

ಮಾಜಿ ಲೈಟ್‍ ವೈಟ್ ವಿಶ್ವ ಚಾಂಪಿಯನ್  ಹಾಗೂ 2019ರಿಂದ 2012ರ ತನಕದ ವಿಶ್ವ ಬಾಕ್ಸಿಂಗ್ ಅಸೋಸಿಯೇಶನ್ ಚಾಂಪಿಯನ್ ಆಗಿದ್ದಾರೆ ಆಮಿರ್ ಖಾನ್.

ಸ್ವಿಝರ್ ಲ್ಯಾಂಡ್ ನ ಟೆನಿಸ್ ತಾರೆ, ವಿಶ್ವದ ಮಾಜಿ ನಂ. 1 ಆಟಗಾರ ರೋಜರ್ ಫೆಡರರ್ ಮತ್ತವರ ಪತ್ನಿ ಮಿರ್ಕಾ ತಮ್ಮ ದೇಶದ ಕೊರೋನ ವೈರಸ್ ವಿರುದ್ಧದ ಹೋರಾಟಕ್ಕೆ ಒಂದು ಮಿಲಿಯನ್ ಸ್ವಿಸ್ ಫ್ರ್ಯಾಂಕ್ ದೇಣಿಗೆ ನೀಡುವುದಾಗಿ ಬುಧವಾರ ಘೋಷಿಸಿದ್ದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)