ವಿಶೇಷ-ವರದಿಗಳು
ವಿಶ್ವ ಆರೋಗ್ಯ ಸಂಸ್ಥೆಯಿಂದ 4 ಹಂತದ 'ಲಾಕ್ ಡೌನ್'ಗೆ ಶಿಫಾರಸು: ವೈರಲ್ ಸಂದೇಶದ ಅಸಲಿಯತ್ತೇನು ?
ಹೊಸದಿಲ್ಲಿ: ಕೋವಿಡ್-19 ವಿರುದ್ಧದ ಹೋರಾಟಕ್ಕೆ ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದ 21 ದಿನಗಳ ಲಾಕ್ ಡೌನ್ ಅವಧಿ ಎಪ್ರಿಲ್ 14ಕ್ಕೆ ಅಂತ್ಯವಾಗಲಿದೆ. ನಂತರ ಸರಕಾರ ಯಾವ ಕ್ರಮ ಕೈಗೊಳ್ಳಲಿದೆ ಎಂಬ ಕುತೂಹಲ ಎಲ್ಲೆಡೆ ಇರುವಂತೆಯೇ ವಿಶ್ವ ಆರೋಗ್ಯ ಸಂಸ್ಥೆಯು ನಾಲ್ಕು ಹಂತದ ಲಾಕ್ ಡೌನ್ ಪ್ರಕ್ರಿಯೆಯನ್ನು ಶಿಫಾರಸು ಮಾಡಿದೆ ಎಂಬರ್ಥ ನೀಡುವ ಸಂದೇಶ ಫೇಸ್ ಬುಕ್ ನಲ್ಲಿ ವೈರಲ್ ಆಗಿದೆ.
ಈ ವೈರಲ್ ಸಂದೇಶದಂತೆ ಒಂದು ದಿನದ ಲಾಕ್ ಡೌನ್ ಮುಗಿದ ನಂತರ ಎರಡನೇ ಹಂತದಲ್ಲಿ 21 ದಿನಗಳ ಲಾಕ್ ಡೌನ್, ನಂತರ ಐದು ದಿನಗಳ ತರುವಾಯ ಮೂರನೇ ಹಂತದಲ್ಲಿ 28 ದಿನಗಳ ಲಾಕ್ ಡೌನ್ ಹಾಗೂ ಮುಂದೆ 5 ದಿನಗಳ ನಂತರ ನಾಲ್ಕನೇ ಹಂತದಲ್ಲಿ 15 ದಿನಗಳ ಲಾಕ್ ಡೌನ್ ಎಂದು ಬರೆಯಲಾಗಿತ್ತು.
ಈ ಕುರಿತಂತೆ India Today ಫ್ಯಾಕ್ಟ್ ಚೆಕ್ ನಡೆಸಿದ್ದು, ವಿಶ್ವ ಬ್ಯಾಂಕ್ ಪ್ರತಿನಿಧಿಯೊಬ್ಬರನ್ನೂ ಸಂಪರ್ಕಿಸಿತ್ತು. ಅದಕ್ಕೆ ಅವರು ಈ ವೈರಲ್ ಸಂದೇಶ ನಕಲಿ ಹಾಗೂ ವಿಶ್ವ ಆರೋಗ್ಯ ಸಂಸ್ಥೆ ಲಾಕ್ ಡೌನ್ ಕುರಿತಂತೆ ಯಾವುದೇ ನಿಬಂಧನೆಗಳನ್ನು ವಿಧಿಸಿಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ.
‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ