varthabharthi


ಓ ಮೆಣಸೇ

ಓ ಮೆಣಸೇ...

ವಾರ್ತಾ ಭಾರತಿ : 12 Apr, 2020
ಪಿ.ಎ.ರೈ

ಯಾರೇ ದುರಾಲೋಚನೆ ಮಾಡಿದರೂ (ಕೊರೋನ ಬಗ್ಗೆ) ನಮ್ಮ ರಾಮ, ಈಶ್ವರ ಭಗವಂತ ನಮ್ಮನ್ನು ಕಾಪಾಡುತ್ತಾರೆ - ಸೋಮಶೇಖರರೆಡ್ಡಿ, ಶಾಸಕ
ನಿಮ್ಮಿಂದ ಜನರನ್ನು ಭಗವಂತ ಕಾಪಾಡಬೇಕಾದ ಸ್ಥಿತಿ ಬಂದಿದೆ.

ಲಾಕ್‌ಡೌನ್ ಅವಧಿಯಲ್ಲಿ ಖಾಸಗಿ ಆಸ್ಪತ್ರೆಗಳು ಬಂದ್‌ಮಾಡಿದರೆ ಪರವಾನಿಗೆ ರದ್ದು - ಶ್ರೀರಾಮುಲು , ಸಚಿವ

 ರೋಗಿಗಳು ಆಸ್ಪತ್ರೆಗೆ ಬರದ ಹಾಗೆ ಪೊಲೀಸರು ತಡೆದರೆ?

 ನಿಮ್ಮಂತಹ ಪಾಪದವರಿಗೆ (ಪೌರಕಾರ್ಮಿಕರು) ಕೊರೋನ ಬರುವುದಿಲ್ಲ, ಅದು ಶ್ರೀಮಂತರಿಗೆ ಮಾತ್ರ ಬರುವುದು
 - ಯು.ಟಿ.ಖಾದರ್, ಮಾಜಿ ಸಚಿವ
ಇದೀಗ ಶ್ರೀಮಂತರು ಅದನ್ನು ಪಾಪದವರಿಗೆ ಹಂಚಿ ತಮ್ಮ ಹೃದಯ ವೈಶಾಲ್ಯತೆಯನ್ನು ಮೆರೆಯುತ್ತಿದ್ದಾರೆ.

ದಿಲ್ಲಿ ನಿಝಾಮುದ್ಧೀನ್ ಸಭೆಗೆ ಹೋದವರನ್ನು ದೇಶದ್ರೋಹಿಗಳೆಂದು ಘೋಷಿಸಬೇಕು - ಶೋಭಾಕರಂದ್ಲಾಜೆ, ಸಂಸದೆ

 ಶಾಸಕನ ಹುಟ್ಟುಹಬ್ಬದಲ್ಲಿ ಭಾಗವಹಿಸಿದವರಿಗೆ ಕೊರೋನ ಶೌರ್ಯ ಪ್ರಶಸ್ತಿ ಕೊಡೋಣವೆ?

 ಭಾರತ -ಅಮೆರಿಕ ನಡುವಿನ ಬಾಂಧವ್ಯವನ್ನು ಕೋವಿಡ್-19 ವಿರುದ್ಧದ ಹೋರಾಟಕ್ಕೆ ಬಳಸಲು ನಿರ್ಧರಿಸಲಾಗಿದೆ
 -ನರೇಂದ್ರ ಮೋದಿ, ಪ್ರಧಾನಿ
 ಬಾಂಧವ್ಯ ಎಂದರೆ ಭಾರತ ಕೊಡುವುದು, ಅಮೆರಿಕ ಪಡೆದುಕೊಳ್ಳುವುದೇ?

ಖಾಸಗಿ ಶಾಲೆಗಳಲ್ಲಿ ಡೊನೇಶನ್ ಮತ್ತು ಶುಲ್ಕ ಹಾವಳಿಗಳಿಗೆ ಶೀಘ್ರವೇ ಕಡಿವಾಣ ಹಾಕಲಾಗುವುದು - ಸುರೇಶ್‌ಕುಮಾರ್, ಸಚಿವ

ಈ ಶೀಘ್ರ ಎನ್ನುವ ಪದವನ್ನು ಕಳೆದ ನಲವತ್ತು ವರ್ಷಗಳಿಂದ ಬಳಸಿಕೊಂಡು ಬರಲಾಗಿದೆ.

ಮೋದಿ ಗ್ರೇಟ್, ತುಂಬಾ ಒಳ್ಳೆಯವರು - ಡೊನಾಲ್ಡ್‌ಟ್ರಂಪ್, ಅಮೆರಿಕ ಅಧ್ಯಕ್ಷ
 ಅಮೆರಿಕನ್ನರಿಗೆ ಅನ್ನಿಸಿದರೆ ಸಾಕೆ, ಭಾರತೀಯರಿಗೂ ಗ್ರೇಟ್ ಅನ್ನಿಸಬೇಡವೇ?

 ದೇಶದಲ್ಲಿ ರಸಗೊಬ್ಬರ ಸಂಗ್ರಹ ಸಾಕಷ್ಟಿದೆ- ಡಿ.ವಿ.ಸದಾನಂದಗೌಡ, ಕೇಂದ್ರಸಚಿವ
 ಸದ್ಯಕ್ಕೆ ರೈತರ ಕೊರತೆ ಇದೇ ಅಂತೀರಾ?

ಆಟ ದೇಶಕ್ಕಿಂತ ದೊಡ್ಡದಲ್ಲ - ಕಪಿಲ್‌ದೇವ್, ಮಾಜಿ ಕ್ರಿಕೆಟಿಗ

ಆಟಕ್ಕಿಂತ ಹಣ ದೊಡ್ಡದು ಎಂದವರ ಪಟ್ಟಿಯೇ ಇದೆ.

ಸಾಮಾಜಿಕ ಅಂತರ ಅಸ್ಪಶ್ಯತೆಯಾಗಿ ಕಾಣುತ್ತಿದೆ - ನಾಗತಿಹಳ್ಳಿ ಚಂದ್ರಶೇಖರ್, ಸಿನೆಮಾ ನಿರ್ದೇಶಕ

ಕೊರೋನದ ಬಳಿಕ ಅಸ್ಪಶ್ಯತೆ ದೇಶದ ಹೆಮ್ಮೆ ಎಂದು ಬಿಂಬಿತವಾಗುತ್ತಿದೆ.

ಕೊರೋನ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು -ಬಸವರಾಜ ಬೊಮ್ಮಾಯಿ, ಸಚಿವ

 ಸುಳ್ಳು ಸುದ್ದಿಗಳ ಮೂಲಕವೇ ಅಧಿಕಾರಕ್ಕೆ ಬಂದವರಿಂದ ಈ ಮಾತೆ?

 ಕೊರೋನ ಎದುರಿಸಲು ಹೆಚ್ಚು ನಿಂಬೆಹಣ್ಣು ಉಪಯೋಗಿಸಿ- ಬಿ.ಸಿ.ಪಾಟೀಲ್, ಕೃಷಿ ಸಚಿವ

ನಿಂಬೆಹಣ್ಣಿನ ಜೊತೆಗೆ ಮೆಣಸಿನ ಕಾಯಿ ಜೋಡಿಸಿ ಮನೆಯ ಮುಂದೆ ತೂಗು ಹಾಕಲು ಹೇಳುತ್ತಿರಬೇಕು.

ಕ್ವಾರಂಟೈನ್‌ನಲ್ಲಿರದ ಕೊರೋನ ರೋಗಿ 30 ದಿನಗಳಲ್ಲಿ 406 ಮಂದಿಗೆ ಸೋಂಕು ಹರಡಬಲ್ಲ - ಐಸಿಎಂಆರ್ ವರದಿ

 ಕ್ವಾರಂಟೈನ್‌ನಲ್ಲಿರದ ಕೋಮು ರೋಗಿ ಹರಡುವ ಸೋಂಕಿನ ಸಂಖ್ಯೆ ಇನ್ನೂ ಲೆಕ್ಕಕ್ಕೆ ಸಿಕ್ಕಿಲ್ಲವಂತೆ.

ಬೇರೆ ದೇಶವೊಂದರ ಮುಖ್ಯಸ್ಥ (ಟ್ರಂಪ್)ಅಥವಾ ಸರಕಾರ, ಇನ್ನೊಂದು ದೇಶಕ್ಕೆ ಬಹಿರಂಗ ಬೆದರಿಕೆಯೊಡ್ಡುವುದನ್ನು ನಾನೆಂದೂ ಕೇಳಿಲ್ಲ - ಶಶಿ ತರೂರ್, ಮಾಜಿ ಸಚಿವ

ಅದಕ್ಕಾಗಿ ಪ್ರಧಾನಿ ಮೋದಿ ಅವರನ್ನು ನಾವು ಅಭಿನಂದಿಸಬೇಕು.

ಕೊರೋನ ವೈರಸ್ ಸಂಕಷ್ಟ ಕಾಲದಲ್ಲಿ ರಾಜಕಾರಣ ಮಾಡಲು ಬಯಸುವುದಿಲ್ಲ - ಡಿ.ಕೆ.ಶಿವಕುಮಾರ್, ಮಾಜಿ ಸಚಿವ
 ನೀವು ರಾಜಕಾರಣ ಮಾಡಲು ಯಾವ ಕಾಲ ಬರಬೇಕು?

 ಕೊರೋನ ವೈರಸ್ ಹರಡುವವರನ್ನು ಗುಂಡಿಟ್ಟು ಸಾಯಿಸಿ
 - ರೇಣುಕಾಚಾರ್ಯ, ಮಾಜಿ ಸಚಿವ
 ಬಿಜೆಪಿ ಶಾಸಕ ಹುಟ್ಟು ಹಬ್ಬಕ್ಕೆ ಕೋವಿ ಹಿಡಿದುಕೊಂಡು ಹೋಗಬೇಕಾಗಿತ್ತು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)

ಇನ್ನಷ್ಟು ಓ ಮೆಣಸೇ ಸುದ್ದಿಗಳು