varthabharthi


ಸಿನಿಮಾ

ಕೊರೋನ ವಿರುದ್ಧದ ಹೋರಾಟ: 1.30 ಕೋಟಿ ರೂ. ದೇಣಿಗೆ ನೀಡಿದ ತಮಿಳು ನಟ ವಿಜಯ್

ವಾರ್ತಾ ಭಾರತಿ : 22 Apr, 2020

ಚೆನ್ನೈ: ಕೊರೋನ ವೈರಸ್ ವಿರುದ್ಧದ ಹೋರಾಟಕ್ಕೆ ಪಿಎಂ ಕೇರ್ಸ್ ಹಾಗೂ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳ ಪರಿಹಾರ ನಿಧಿಗಳಿಗೆ  ತಮಿಳು ನಟ ವಿಜಯ್ ಅವರು 1.30 ಕೋಟಿ ರೂ. ದೇಣಿಗೆ ನೀಡಿದ್ದಾರೆ.

ವಿಜಯ್ ಅವರು ತಮಿಳುನಾಡು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 50 ಲಕ್ಷ ರೂ. ನೀಡಿದ್ದರೆ, ಪಿಎಂ ಕೇರ್ಸ್ ನಿಧಿಗೆ 25 ಲಕ್ಷ ರೂ. ದೇಣಿಗೆ ನೀಡಿದ್ದಾರೆ. ಕೇರಳ ಸಿಎಂ ಪರಿಹಾರ ನಿಧಿಗೆ ಅವರು ರೂ 10 ಲಕ್ಷ  ನೀಡಿದ್ದಾರೆ.

ಇದರ ಹೊರತಾಗಿ ಚಿತ್ರರಂಗದ ದಿನಗೂಲಿ ನೌಕರರಿಗೆ ನೆರವಾಗಲೆಂದು ದಕ್ಷಿಣ ಭಾರತ ಚಿತ್ರರಂಗ ಉದ್ಯೋಗಿಗಳ ಫೆಡರೇಶನ್‍ಗೆ ರೂ 25 ಲಕ್ಷ ದೇಣಿಗೆಯನ್ನು ವಿಜಯ್ ಘೋಷಿಸಿದ್ದಾರೆ. ಜತೆಗೆ ಕರ್ನಾಟಕ,  ಆಂಧ್ರ ಪ್ರದೇಶ, ತೆಲಂಗಾಣ ಹಾಗೂ ಪಾಂಡಿಚೇರಿ ಮುಖ್ಯಮಂತ್ರಿಗಳ ಪರಿಹಾರ ನಿಧಿಗಳಿಗೂ ಅವರು  5 ಲಕ್ಷ ರೂ. ದೇಣಿಗೆ ನೀಡಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)