varthabharthi


ನಿಧನ

ಅಜಿಲಾಡಿ ಚಿತ್ತರಂಜನ್ ರೈ

ವಾರ್ತಾ ಭಾರತಿ : 23 Apr, 2020

ಮಂಗಳೂರು, ಎ.23: ನಗರದ ಪಾಂಡೇಶ್ವರ ಓಲ್ಡ್‌ಕೆಂಟ್ ರಸ್ತೆಯ ನಿವಾಸಿ ಅಜಿಲಾಡಿ ಚಿತ್ತರಂಜನ್ ರೈ (85) ಗುರುವಾರ ತನ್ನ ಸ್ವಗೃಹದಲ್ಲಿ ನಿಧನರಾದರು.

ಅವರು ಪುತ್ರಿ ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದಾರೆ. ಎ ಸಿ. ರೈ ಎಂದು ಜನಪ್ರಿಯರಾಗಿದ್ದ ಅವರು ನಗರದ ಬದಿಲಗುತ್ತು ಕುಟುಂಬದ ಹಿರಿಯ ಸದಸ್ಯರಲ್ಲಿ ಒಬ್ಬರಾಗಿದ್ದರು.

ಸ್ನಾತಕೋತ್ತರ ಹಾಗೂ ಎಲ್‌ಎಲ್‌ಬಿ ಪದವಿ ಪಡೆದ ಅವರ 60ರ ದಶಕದಲ್ಲಿ ಕನ್ಸಾಲಿಡೇಟೆಡ್ ಕಾಫಿ ಲಿ.ಗೆ ಸೇರಿ ಜನರಲ್ ಮ್ಯಾನೇಜರ್ ಸ್ಥಾನಕ್ಕೆ ಏರಿ ಮೂರು ದಶಕಗಳ ಕಾಲ ಕಂಪನಿಗೆ ಸೇವೆ ಸಲ್ಲಿಸಿದರು. 80ರ ದಶಕದಲ್ಲಿ ಸ್ವಯಂ ನಿವೃತ್ತಿ ಪಡೆದು ಎಲ್ಎಸಿ ಎಂಟರ್‌ಪ್ರೈಸಸ್‌ನಡಿ ವ್ಯಾಪಾರ ನಡೆಸಿ ಗಮನ ಸೆಳೆದಿದ್ದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)