varthabharthi


ಗಲ್ಫ್ ಸುದ್ದಿ

ಅಬುಧಾಬಿ: ಭಾರತೀಯ ಉದ್ಯಮಿ ಕೊರೋನ ವೈರಸ್‌ಗೆ ಬಲಿ

ವಾರ್ತಾ ಭಾರತಿ : 3 May, 2020

ಅಬುಧಾಬಿ (ಯುಎಇ), ಮೇ 3: ಅಬುಧಾಬಿಯ ಭಾರತೀಯ ಉದ್ಯಮಿ ಹಾಗೂ ಸಮಾಜ ಸೇವಕ ಪಿ.ಕೆ. ಕರೀಂ ಹಾಜಿ ಗುರುವಾರ ಕೊರೋನ ವೈರಸ್‌ಗೆ ಬಲಿಯಾಗಿದ್ದಾರೆ.

ಕೇರಳದ 62 ವರ್ಷದ ಉದ್ಯಮಿಯು ಅಬುಧಾಬಿ ಕೇರಳ ಮುಸ್ಲಿಮ್ ಕಲ್ಚರಲ್ ಸೆಂಟರ್ (ಕೆಎಂಸಿಸಿ)ನ ಮಾಜಿ ಅಧ್ಯಕ್ಷರಾಗಿದ್ದರು. ಅವರು ಇಂಡಿಯನ್ ಇಸ್ಲಾಮಿಕ್ ಸೆಂಟರ್, ಸುನ್ನಿ ಸೆಂಟರ್ ಮತ್ತು ಇತರ ಹಲವಾರು ಸಂಘ ಸಂಸ್ಥೆಗಳ ಸಕ್ರಿಯ ಕಾರ್ಯಕರ್ತರಾಗಿದ್ದರು.

ತಿರುವನಂತಪುರಂ ನಿವಾಸಿಯಾಗಿದ್ದ ಅವರಿಗೆ ಅಬುಧಾಬಿಯ ಬುರ್ಜೀಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು. ಅವರು ಸುಮಾರು 10 ದಿನಗಳ ಕಾಲ ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸಿದರು.

ಅವರು ಪತ್ನಿ ಮತ್ತು ಮೂವರು ಪುತ್ರರನ್ನು ಅಗಲಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)