varthabharthi


ಕ್ರೀಡೆ

ಅಫ್ರಿದಿಗೆ ಮತ್ತೆ ಬೆಂಬಲ ನೀಡಲಾರೆ: ಯುವರಾಜ್

ವಾರ್ತಾ ಭಾರತಿ : 17 May, 2020

ಹೊಸದಿಲ್ಲಿ, ಮೇ 17: ಕಾಶ್ಮೀರ ಹಾಗೂ ಪ್ರಧಾನಿ ನರೇಂದ್ರ ಮೋದಿಯ ಕುರಿತು ಅವಹೇಳನಕಾರಿ ಹೇಳಿಕೆ ನೀಡಿರುವ ಶಾಹಿದ್ ಅಫ್ರಿದಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಯುವರಾಜ್ ಸಿಂಗ್, ಅಫ್ರಿದಿ ಚಾರಿಟಿ ಫೌಂಡೇಶನ್‌ಗೆ ಬೆಂಬಲ ನೀಡಿರುವುದಕ್ಕೆ ನನಗೆ ಈಗ ಖೇದವಾಗುತ್ತಿದೆ. ಇನ್ನು ಮುಂದಕ್ಕೆ ಅವರಿಗೆ ಯಾವುದೇ ಬೆಂಬಲ ನೀಡುವುದಿಲ್ಲ ಎಂದರು.

ಇತ್ತೀಚೆಗೆ ಯುವರಾಜ್ ಹಾಗೂ ಹರ್ಭಜನ್ ಪಾಕಿಸ್ತಾನದಲ್ಲಿ ಕೋವಿಡ್-19 ವಿರುದ್ಧ ಹೋರಾಡಲು ಅಫ್ರಿದಿಯ ಚಾರಿಟಿ ಫೌಂಡೇಶನ್‌ಗೆ ದೇಣಿಗೆ ನೀಡುವಂತೆ ಕೇಳಿಕೊಂಡಿದ್ದರು. ಅದೇ ರೀತಿ ಭಾರತದಲ್ಲೂ ಭಾರೀ ಟೀಕೆಗೆ ಗುರಿಯಾಗಿದ್ದರು. ‘‘ಓರ್ವ ಜವಾಬ್ದಾರಿಯುತ ಭಾರತೀಯನಾಗಿ ಇಂತಹ ಶಬ್ದಗಳನ್ನು ನಾನು ಸಹಿಸುವುದಿಲ್ಲ. ಮಾನವೀಯತೆ ದೃಷ್ಟಿಯಿಂದ ನಿಮಗಾಗಿ ಮನವಿ ಮಾಡಿದ್ದೆ.ಇನ್ನು ಮುಂದೆ ಹಾಗೆ ಮಾಡಲಾರೆ’’ ಎಂದು ಯುವಿ ರವಿವಾರ ಟ್ವೀಟ್ ಮಾಡಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)