ಇ-ಜಗತ್ತು
ವಿಡಿಯೋ ಸ್ಟೇಟಸ್ ಅಪ್ ಲೋಡ್ ಮಿತಿ ಮತ್ತೆ 30 ಸೆಕೆಂಡುಗಳಿಗೆ ಹೆಚ್ಚಿಸಿದ ವಾಟ್ಸ್ಯಾಪ್
ವಾರ್ತಾ ಭಾರತಿ : 20 May, 2020
2 ತಿಂಗಳುಗಳ ನಂತರ ಸಾಮಾಜಿಕ ಜಾಲತಾಣ ವಾಟ್ಸ್ಯಾಪ್ ತನ್ನ ಬಳಕೆದಾರರಿಗೆ 30 ನಿಮಿಷಗಳ ವಿಡಿಯೋ ಸ್ಟೇಟಸ್ ಅಪ್ ಲೋಡ್ ಮಾಡುವ ಅವಕಾಶವನ್ನು ಮತ್ತೆ ನೀಡಿದೆ. 2 ತಿಂಗಳುಗಳ ಕಾಲ ವಿಡಿಯೋ ಸ್ಟೇಟಸ್ ಸಮಯವನ್ನು 15 ಸೆಕೆಂಡುಗಳಿಗೆ ಸೀಮಿತಗೊಳಿಸಲಾಗಿತ್ತು.
2017ರಲ್ಲಿ ವಾಟ್ಸ್ಯಾಪ್ ಹೊಸ ಸ್ಟೇಟಸ್ ಫೀಚರನ್ನು ಬಳಕೆದಾರರಿಗೆ ಪರಿಚಯಿಸಿತ್ತು. ಆರಂಭದಲ್ಲಿ 90 ಸೆಕೆಂಡುಗಳಿಂದ 3 ನಿಮಿಷಗಳ ವಿಡಿಯೋ ಅಪ್ ಲೋಡ್ ಮಾಡುವ ಅವಕಾಶವನ್ನೂ ನೀಡಿತ್ತು.
2 ತಿಂಗಳ ಹಿಂದೆ ಸ್ಟೇಟಸ್ ಕಾಲಮಿತಿಯನ್ನು 15 ಸೆಕೆಂಡುಗಳಿಗೆ ಸೀಮಿತಗೊಳಿಸದ್ದ ನಿರ್ಧಾರವನ್ನು ಹಿಂದೆಗೆದುಕೊಂಡು ಮತ್ತೆ 30 ಸೆಕೆಂಡುಗಳ ಮಿತಿಯನ್ನು ನಿಗದಿಪಡಿಸಿರುವುದರ ಬಗ್ಗೆ WABetaInfo ಟ್ವೀಟ್ ಮಾಡಿ ಮಾಹಿತಿ ನೀಡಿದೆ.
‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Comments (Click here to Expand)