varthabharthi


ರಾಷ್ಟ್ರೀಯ

ಕೇಂದ್ರ ಕ್ಯಾಬಿನೆಟ್ ನ ಮಹತ್ವದ ನಿರ್ಧಾರಗಳು ಪ್ರಕಟ

ಬೀದಿಬದಿ ವ್ಯಾಪಾರಿಗಳಿಗೆ ‘ಪಿಎಂ ಸ್ವನಿಧಿ’ ಯೋಜನೆ, 14 ಬೆಳೆಗಳ ಕನಿಷ್ಟ ಬೆಂಬಲ ಬೆಲೆ 50ರಿಂದ 83 ಶೇ.ದಷ್ಟು ಹೆಚ್ಚಳ

ವಾರ್ತಾ ಭಾರತಿ : 1 Jun, 2020

ಹೊಸದಿಲ್ಲಿ: ಕೊರೋನ ವೈರಸ್ ಬಿಕ್ಕಟ್ಟಿನಿಂದಾಗಿ ಸಂಕಷ್ಟಕ್ಕೆ ಸಿಲುಕಿರುವ ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ಯಮಗಳಿಗೆ ನೆರವಾಗಲು 20 ಸಾವಿರ ಕೋಟಿ ರೂ.ಗಳ ಪ್ಯಾಕೇಜ್ ಘೋಷಿಸಲಾಗಿದೆ ಎಂದು ಕೇಂದ್ರ ಸರಕಾರ ಮಾಹಿತಿ ನೀಡಿದೆ.

ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್, ಈ ಪ್ಯಾಕೇಜ್ ನಿಂದ 2 ಲಕ್ಷ ಎಂಎಸ್ಎಂಇಗಳಿಗೆ ಸಹಾಯವಾಗಲಿದೆ ಎಂದರು.

ರೈತರಿಗೆ ನೆರವಾಗುವ ಹಿನ್ನೆಲೆಯಲ್ಲಿ 14 ಖಾರಿಫ್ ಬೆಳೆಗಳ ಕನಿಷ್ಟ ಬೆಂಬಲ ಬೆಲೆಯನ್ನು 50ರಿಂದ 83 ಶೇಕಡದಷ್ಟು ಹೆಚ್ಚಿಸಲಾಗಿದೆ ಎಂದು ಕೇಂದ್ರ ಸಚಿವ ನರೇಂದ್ರ ತೋಮರ್ ಮಾಹಿತಿ ನೀಡಿದರು.

ರೈತರು ತಾವು ಪಡೆದುಕೊಂಡ ಸಾಲ ಮರುಪಾವತಿಸಲು ಹೆಚ್ಚಿನ ಸಮಯಾವಕಾಶವನ್ನು ನೀಡಲಾಗುವುದು. ಆಗಸ್ಟ್ ವರೆಗೆ ಇದಕ್ಕೆ ಸಮಯಾವಕಾಶ ನೀಡಲಾಗಿದೆ ಎಂದವರು ಹೇಳಿದರು.

ಬೀದಿ ಬದಿ ವ್ಯಾಪಾರಿಗಳಿಗೆ ಸಣ್ಣ ಮೊತ್ತದ ಸಾಲ ನೀಡುವ ‘ಪಿಎಂ ಸ್ವನಿಧಿ-ಪ್ರಧಾನಮಂತ್ರಿ ಯೋಜನೆಗೆ ಇಂದು ಚಾಲನೆ ನೀಡಲಾಯಿತು. ಈ ಯೋಜನೆಯಿಂದ 50 ಲಕ್ಷ ಬೀದಿಬದಿ ವ್ಯಾಪಾರಿಗಳಿಗೆ ಸಹಾಯವಾಗಲಿದೆ. ಪ್ರತಿ ಬೀದಿ ಬದಿ ವ್ಯಾಪಾರಿ 10 ಸಾವಿರ ರೂ. ಸಾಲ ಪಡೆಯಲಿದ್ದಾರೆ ಎಂದು ಸಚಿವರು ಮಾಹಿತಿ ನೀಡಿದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)