ಏಕಕಾಲಕ್ಕೆ 25 ಶಾಲೆಗಳಲ್ಲಿ ‘ಕೆಲಸ ಮಾಡಿ’ ಕೋಟಿ ರೂ. ಸಂಬಳ ಪಡೆದ ಶಿಕ್ಷಕಿಯ ಬಂಧನ
ಲಕ್ನೋ: 25 ಶಾಲೆಗಳಲ್ಲಿ ಏಕಕಾಲಕ್ಕೆ ‘ಕೆಲಸ ಮಾಡಿ’ 1 ಕೋಟಿ ಸಂಬಳ ಪಡೆದು ಎಲ್ಲರ ಹುಬ್ಬೇರಿಸಿದ್ದ ಶಿಕ್ಷಕಿಯನ್ನು ಉತ್ತರ ಪ್ರದೇಶ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಶಿಕ್ಷಕಿಯನ್ನು ಅನಾಮಿಕ ಶುಕ್ಲಾ ಎಂದು ಗುರುತಿಸಲಾಗಿದೆ. ಈ ಬಗ್ಗೆ ಮಾಹಿತಿ ನೀಡಿದ ಕಾಸ್ ಗಂಜ್ ಪ್ರಾಥಮಿಕ ಶಿಕ್ಷಣಾಧಿಕಾರಿ, “ಅನಾಮಿಕ ಶನಿವಾರ ರಾಜೀನಾಮೆ ಪತ್ರ ಸಲ್ಲಿಸಿದ್ದರು. ನಂತರ ಆಕೆಯನ್ನು ವಶಕ್ಕೆ ಪಡೆಯಲಾಯಿತು. ಪೊಲೀಸರಿಗೆ ಮಾಹಿತಿ ನೀಡಿದ್ದು, ವಂಚನೆಗೈದ ಅನಾಮಿಕಾಳನ್ನು ಪೊಲೀಸರು ಬಂಧಿಸಿದ್ದಾರೆ” ಎಂದು ತಿಳಿಸಿದ್ದಾರೆ.
ಶಿಕ್ಷಣ ಇಲಾಖೆ ಶಿಕ್ಷಕರಿಗಾಗಿ ಡಿಜಿಟಲ್ ಡಾಟಾಬೇಸ್ ಆರಂಭಿಸಿದ ನಂತರ ಬಾಗ್ ಪತ್ ಜಿಲ್ಲೆಯ ಕೆಜಿಬಿವಿ ಶಾಲೆಯಲ್ಲಿ ವಿಜ್ಞಾನ ಶಿಕ್ಷಕಿಯಾಗಿದ್ದ ಅನಾಮಿಕ ಏಕಕಾಲಕ್ಕೆ 25 ಜಿಲ್ಲೆಗಳಲ್ಲಿ ಕೆಲಸ ಮಾಡುತ್ತಿರುವುದು ಬೆಳಕಿಗೆ ಬಂದಿತ್ತು.
ಘಟನೆ ಬೆಳಕಿಗೆ ಬರುತ್ತಲೇ ಉತ್ತರ ಪ್ರದೇಶ ಪ್ರಾಥಮಿಕ ಶಿಕ್ಷಣ ಸಚಿವ ತನಿಖೆಗೆ ಆದೇಶಿಸಿದ್ದರು.
Next Story