varthabharthi


ಮಾಹಿತಿ - ಮಾರ್ಗದರ್ಶನ

ಸವಿತಾ ಸಮಾಜ: ಉದ್ಯೋಗ ಸಾಲ ಯೋಜನೆಗೆ ಅರ್ಜಿ ಆಹ್ವಾನ

ವಾರ್ತಾ ಭಾರತಿ : 10 Jul, 2020

ಮಂಗಳೂರು, ಜು.10: ಪ್ರಸಕ್ತ 2020-21ನೇ ಸಾಲಿನಲ್ಲಿ ಸವಿತಾ ಸಮಾಜಕ್ಕೆ ಸೇರಿದವರು ಉದ್ಯೋಗ ಸಾಲ ಯೋಜನೆಗೆ ಅರ್ಜಿ ಸಲ್ಲಿಸಬಹುದಾಗಿದೆ.

ಸವಿತಾ ಸಮಾಜಕ್ಕೆ ಸೇರಿದ ಪರಿಯಾಳ, ಅಂಬಟ್ಟನ್, ಭಜಂತ್ರಿ, ಭಂಡಾರಿ, ಚೌರಿಯ, ಹಡಪದ, ಕವುಟಿಯನ್, ಕೆಲಸಿ, ಕ್ಷೌರಿಕ, ಕ್ಷೌರದ್, ಮಹಾಲೆ, ಮಂಗಳ, ಮೇಲಗಾರ, ನಾಡಿಗ, ನಾಪಿತ, ನವಲಿಗ್, ನಾವಿ, ನಯನಜ ಕ್ಷತ್ರಿಯ, ನ್ಹಾವಿ, ವಾಜಾಂತ್ರಿ, ಸವಿತ, ನಯನಜ ಕ್ಷತ್ರಿ, ನಾಡಿಗ್, ಕ್ಷೌರಿಕ್ ಜನರ ಆರ್ಥಿಕ ಅಭಿವೃದ್ಧಿಗಾಗಿ ಸಾಂಪ್ರದಾಯಿಕ ವೃತ್ತಿದಾರರ ಸಾಲ ಯೋಜನೆ ಮತ್ತು ಸ್ವಯಂ ಉದ್ಯೋಗ ಸಾಲ ಯೋಜನೆಯಲ್ಲಿ ಸಾಲ ಮತ್ತು ಸಹಾಯಧನದ ಸೌಲಭ್ಯ ಪಡೆಯಬಹುದು.

ಅಗತ್ಯ ದಾಖಲಾತಿಗಳನ್ನು ನಿಗಮದ ವೆಬ್‌ಸೈಟ್ www.dbcdc.karnataka.gov.in ಮೂಲಕ ಅರ್ಜಿ ಸಲ್ಲಿಸಬಹುದು. ಅಥವಾ ಎಲ್ಲ ದಾಖಲೆಗಳೊಡನೆ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಜಿಲ್ಲಾ ಕಚೇರಿ, ರೇಡಿಯೋ ಪಾರ್ಕ್ ಬಳಿ, ಉರ್ವಸ್ಟೋರ್, ಮಂಗಳೂರು ಕಚೇರಿಗೆ ಆ.3ರೊಳಗೆ ಸಲ್ಲಿಸಲು ಪ್ರಕಟನೆ ತಿಳಿಸಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)