varthabharthi


ಬೆಂಗಳೂರು

ಬೆಂಗಳೂರಿನಿಂದ ಇತರೆ ಸ್ಥಳಗಳಿಗೆ ಹೆಚ್ಚುವರಿ 800 ಬಸ್ ಗಳನ್ನು ನಿಯೋಜಿಸಿದ ಕೆಎಸ್ಆರ್‌ಟಿಸಿ

ವಾರ್ತಾ ಭಾರತಿ : 13 Jul, 2020

ಬೆಂಗಳೂರು, ಜು.13: ಬೆಂಗಳೂರಿನಿಂದ ಇತರೆ ಸ್ಥಳಗಳಿಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಿಂದ ಹೆಚ್ಚುವರಿಯಾಗಿ ಇಂದು‌ ಮತ್ತು ನಾಳೆ ತಲಾ 800 ಬಸ್ ಗಳನ್ನು ಕಾರ್ಯಚರಣೆ ಮಾಡಲು ನಿಯೋಜಿಸಲಾಗಿದೆ‌.

ಈಗಾಗಲೇ ಇಂದು ಬೆಳಗ್ಗೆ 10 ಗಂಟೆಯವರೆಗೆ 249 ಬಸ್ಸುಗಳನ್ನು ಬೆಂಗಳೂರಿನಿಂದ ಕಾರ್ಯಚರಣೆಗೊಳಿಸಿದ್ದು, 6,641 ಪ್ರಯಾಣಿಕರು ಈಗಾಗಲೇ ಪ್ರಯಾಣಿಸಿದ್ದಾರೆ. ಇಂದು 231 ಬಸ್ ಗಳು ಮುಂಗಡ ಬುಕ್ಕಿಂಗ್ ಆಗಿವೆ.

ಸುರಕ್ಷಿತ ಅಂತರ ಕಾಪಾಡಿ, ಪ್ರತಿಯೊಬ್ಬ ಪ್ರಯಾಣಿಕರಿಗೂ ಥರ್ಮಲ್ ಸ್ಕ್ರೀನಿಂಗ್ ಮಾಡಿ ಪ್ರಯಾಣಿಸಲು ಅವಕಾಶ ಮಾಡಿಕೊಡಲಾಗುತ್ತಿದೆ.  ಸಾರ್ವಜನಿಕರು ಆತಂಕಕ್ಕೆ ಒಳಗಾಗಬೇಡಿ. ಅತೀ ಹೆಚ್ಚು ಬಸ್ಸುಗಳನ್ನು ಕಾರ್ಯಾಚರಣೆಗೆ ಈಗಾಗಲೇ ನಿಯೋಜಿಸಲಾಗಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)