varthabharthi


ಬೆಂಗಳೂರು

ಕೊರೋನ ಸೋಂಕಿಗೆ ಮತ್ತಿಬ್ಬರು ಬಿಬಿಎಂಪಿ ಅಧಿಕಾರಿಗಳು ಮೃತ್ಯು

ವಾರ್ತಾ ಭಾರತಿ : 15 Jul, 2020

ಬೆಂಗಳೂರು, ಜು.15: ಕೊರೋನ ಸೋಂಕಿನಿಂದ ಬಿಬಿಎಂಪಿಯ ಇಬ್ಬರು ಅಧಿಕಾರಿಗಳು ಬುಧವಾರ ಮೃತಪಟ್ಟಿದ್ದಾರೆ.

ಮಹಾಲಕ್ಷ್ಮೀಪುರ ವಿಧಾನಸಭಾಕ್ಷೇತ್ರದ ಕಾರ್ಯಪಾಲಕ ಇಂಜಿನಿಯರ್ ಕಚೇರಿಯಲ್ಲಿ ವ್ಯವಸ್ಥಾಪಕರಾಗಿದ್ದ ಆರ್.ವಿಶ್ವನಾಥ್(52) ಹಾಗೂ ಗೋವಿಂದರಾಜನಗರ ಕ್ಷೇತ್ರ ಕಂದಾಯ ಅಧಿಕಾರಿ ಕಚೇರಿಯಲ್ಲಿ ವ್ಯವಸ್ಥಾಪಕರಾಗಿದ್ದ ಬಿ.ಕೆ. ಶೈಲೇಶ್(58) ಅವರು ಕೊರೋನ ಸೋಂಕಿನಿಂದ ಬುಧವಾರ ಮೃತರಾಗಿದ್ದಾರೆ.

ಮಂಗಳವಾರವಷ್ಟೇ ಯಲಹಂಕ ಹಳೆಪಟ್ಟಣ ಉಪ ವಿಭಾಗದ ಕಂದಾಯ ಮೌಲ್ಯಮಾಪಕ ನಟರಾಜ್(58) ಹಾಗೂ ಚಾಮರಾಜಪೇಟೆ ಉಪವಿಭಾಗದ ಕಂದಾಯ ಮೌಲ್ಯಮಾಪಕ ತಿಮ್ಮಯ್ಯ(54) ಕೊರೋನದಿಂದ ಮೃತಪಟ್ಟಿದ್ದರು.

ವಿಶ್ವನಾಥ್ ಅವರು ಹೃದಯಾಘಾತದಿಂದ ಹಾಗೂ ಶೈಲೇಶ್ ಅವರಿಗೆ ಪಾರ್ಶ್ವವಾಯುವಿನಿಂದಾಗಿ ಎಡಗೈ ಮತ್ತು ಎಡಗಾಲು ಸ್ವಾಧೀನ ಇರಲಿಲ್ಲ. ರಕ್ತದೊತ್ತಡ ಹಾಗೂ ಮಧುಮೇಹ ಸಮಸ್ಯೆಯೂ ಇತ್ತು ಎನ್ನಲಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)