varthabharthi


ಮಾಹಿತಿ - ಮಾರ್ಗದರ್ಶನ

​ಅಲ್ಪಸಂಖ್ಯಾತರ ವಸತಿ ಶಾಲೆ: ಅರ್ಜಿ ಆಹ್ವಾನ

ವಾರ್ತಾ ಭಾರತಿ : 20 Jul, 2020

ಮಂಗಳೂರು, ಜು.20: ದಕ್ಷಿಣ ಕನ್ನಡ ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಡಿ ಕಾರ್ಯ ನಿರ್ವಹಿಸುತ್ತಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆ (ಬಾಲಕಿಯರ), ಪದವಿ ಪೂರ್ವ ವಸತಿ ಕಾಲೇಜು (ಬಾಲಕಿಯರ) ಹಾಗೂ ಮುಸ್ಲಿಂ ವಸತಿ ಶಾಲೆ (ಬಾಲಕರ) ಗಳ 6, 7, 8, 9 ನೇ ತರಗತಿ ಹಾಗೂ ಪ್ರಥಮ ಪಿಯುಸಿ ವಿಜ್ಞಾನ ವಿಭಾಗ ಪ್ರವೇಶಕ್ಕೆ ಅರ್ಜಿ ಅಹ್ವಾನಿಸಲಾಗಿದೆ.

ಅರ್ಜಿಯನ್ನು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಜಿಲ್ಲಾ ಕಚೇರಿ, ಸಂಬಂಧಪಟ್ಟ ವಸತಿ ಶಾಲೆಗಳು, ಕಾಲೇಜು, ಮೌಲಾನ ಅಝಾದ್ ಮಾದರಿ ಶಾಲೆಗಳು ಹಾಗೂ ತಾಲೂಕು ಅಲ್ಪಸಂಖ್ಯಾತರ ವಿಸ್ತರಣಾಧಿಕಾರಿ ಕಚೇರಿಗೆ ಆ.10ರೊಳಗೆ ಸಲ್ಲಿಸಬೇಕು.

ಹೆಚ್ಚಿನ ಮಾಹಿತಿಗೆ ವಸತಿ ಶಾಲೆಗಳನ್ನು ಸಂಪರ್ಕಿಸಬಹುದು. ದೇರಳಕಟ್ಟೆಯ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆ (ಬಾಲಕಿಯರ)- 7975562168/ 9449080150, ಮೊರಾರ್ಜಿ ದೇಸಾಯಿ ಬಾಲಕಿಯರ ಪದವಿ ಪೂರ್ವ ವಸತಿ ಕಾಲೇಜು- 8970707858, ಮುಸ್ಲಿಂ ವಸತಿ ಶಾಲೆ (ಬಾಲಕರ) 9449311924.

ಮೌಲಾನ ಆಝಾದ್ ಮಾದರಿ ಶಾಲೆಗಳು: ಮಂಗಳೂರು ತಾಲೂಕಿನ ಮಂಜನಾಡಿ- 8618235367, ಕಲ್ಲಾಪು ಪಟ್ಲ- 9110878280, ಕುದ್ರೋಳಿ ಗುರುಕಂಬಳ ಕಿನ್ನಿಕಂಬಳ- 8970707858, ಉಳಾಯಿಬೆಟ್ಟು- 9449080150, ಬಂಟ್ವಾಳ ತಾಲೂಕಿನ ಪುದು ಪರಂಗಿಪೇಟೆ- 9481149135, ಅರಳ ಮೂಲರಪಟ್ನ - 9845952483, ಪುತ್ತೂರು ತಾಲೂಕು- 7829892702ನ್ನು ಸಂಪರ್ಕಿಸಬಹುದು ಎಂದು ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣಾಧಿಕಾರಿ ಪ್ರಕಟನೆ ತಿಳಿಸಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)