varthabharthi


ಸಿನಿಮಾ

ಸುಶಾಂತ್ ಸಿಂಗ್ ಆತ್ಮಹತ್ಯೆ ಪ್ರಕರಣದಲ್ಲಿ ’15 ಕೋಟಿ ರೂ.’ ತಿರುವು: ತನಿಖೆಗೆ ಮುಂದಾದ ಈಡಿ

ವಾರ್ತಾ ಭಾರತಿ : 30 Jul, 2020

ಮುಂಬೈ: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ರ ಬ್ಯಾಂಕ್ ಖಾತೆಯಿಂದ 15 ಕೋಟಿ ರೂ. ಹಣವನ್ನು ಅವರ ಗೆಳತಿ ರಿಯಾ ಚಕ್ರವರ್ತಿ ತಮ್ಮ ಬ್ಯಾಂಕ್ ಖಾತೆ, ತಮ್ಮ ಸೋದರನ ಹಾಗೂ ತಾಯಿಯ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಿದ್ದಾರೆ ಎಂದು ಸುಶಾಂತ್ ತಂದೆ ಕೆ ಕೆ ಸಿಂಗ್ ದಾಖಲಿಸಿರುವ ದೂರಿನಲ್ಲಿ ಮಾಡಿರುವ ಆರೋಪ ಜಾರಿ ನಿರ್ದೇಶನಾಲಯದ ಗಮನ ಸೆಳೆದಿದೆ. ನಟನ ತಂದೆ ದಾಖಲಿಸಿದ್ದ ಎಫ್‍ಐಆರ್ ಕುರಿತಾದ ಮಾಹಿತಿಗಳನ್ನು ನಿರ್ದೇಶನಾಲಯ ಕೇಳಿದೆ. ಸುಶಾಂತ್ ಅವರ ಬ್ಯಾಂಕ್ ಖಾತೆಗಳ ಕುರಿತು ಮಾಹಿತಿಯನ್ನು ಜಾರಿ ನಿರ್ದೇಶನಾಲಯ ಬಿಹಾರ ಪೊಲೀಸರಿಂದ ಕೇಳಿದೆ.

ಅಂತೆಯೇ ಬಿಹಾರ ಪೊಲೀಸರು ಮುಂಬೈಯ ಬಾಂದ್ರಾದಲ್ಲಿರುವ ಕೋಟಕ್ ಮಹೀಂದ್ರ ಬ್ಯಾಂಕ್ ಅನ್ನು ಸಂಪರ್ಕಿಸಿ ಮಾಹಿತಿ ಕೋರಿದ್ದಾರೆ. ಮೂಲಗಳ ಪ್ರಕಾರ ಸುಶಾಂತ್ ಹಾಗೂ ರಿಯಾ ಜತೆಯಾಗಿ ಮೂರು ಸ್ಟಾರ್ಟ್-ಅಪ್‍ಗಳಲ್ಲಿ ಹೂಡಿಕೆ ಮಾಡಿದ್ದರೆ, ಇವುಗಳ ಪೈಕಿ ಮೂರರಲ್ಲಿ ರಿಯಾ ಮತ್ತಾಕೆಯ ಸೋದರ ಶೌವಿಕ್ ನಿರ್ದೇಶಕರಾಗಿದ್ದಾರೆ. ಎರಡು ಕಂಪೆನಿಗಳ ವಿಳಾಸ ಉಲ್ವೆ ಹಾಗೂ ಪನ್ವೇಲ್‍ ನಲ್ಲಿನ ಫ್ಲ್ಯಾಟ್‍ ಗಳದ್ದಾಗಿದ್ದು, ಇವುಗಳು ರಿಯಾ ತಂದೆಗೆ ಸೇರಿದ್ದು ಎನ್ನಲಾಗಿದೆ.

ಸುಶಾಂತ್ ತಂದೆ ಪಾಟ್ನಾದಲ್ಲಿ ದಾಖಲಿಸಿರುವ ದೂರಿನಲ್ಲಿ ರಿಯಾ ವಿರುದ್ಧ ಅಕ್ರಮ ದಿಗ್ಬಂಧನ, ವಂಚನೆ, ಆತ್ಮಹತ್ಯೆಗೆ ಪ್ರಚೋದನೆ  ಮತ್ತು ಕಳ್ಳತನ ಆರೋಪ ಹೊರಿಸಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)