varthabharthi


ಇ-ಜಗತ್ತು

ವಿಶ್ವಾದ್ಯಂತ ಜಿಮೇಲ್ ನಲ್ಲಿ ಸಮಸ್ಯೆ: ಬಳಕೆದಾರರ ಆರೋಪ

ವಾರ್ತಾ ಭಾರತಿ : 20 Aug, 2020

ಹೊಸದಿಲ್ಲಿ: ಭಾರತ ಸೇರಿದಂತೆ ವಿಶ್ವಾದ್ಯಂತ ಹಲವೆಡೆಗಳಲ್ಲಿ ಜಿ-ಮೇಲ್ ಬಳಕೆದಾರರು ಇಮೇಲ್ ಸೇವೆಯನ್ನು ಬಳಸುವಾಗ ಸಮಸ್ಯೆಗಳು ಕಾಣಿಸಿಕೊಂಡಿರುವುದಾಗಿ ವರದಿಯಾಗಿದೆ. ಜಿಮೇಲ್ ಮೂಲಕ ಅಟ್ಯಾಚ್ ಮೆಂಟ್ ಗಳನ್ನು ಕಳುಹಿಸಲು ಸಾಧ್ಯವಾಗುತ್ತಿಲ್ಲ ಎಂದು ಬಳಕೆದಾರರು ಆರೋಪಿಸಿದ್ದಾರೆ.

ಇದೇ ಸಂದರ್ಭ ಗೂಗಲ್ ಡ್ರೈವ್ ಸೇವೆಯಲ್ಲೂ ಸಮಸ್ಯೆಗಳು ಕಾಣಿಸಿಕೊಂಡಿದೆ. ಡ್ರೈವ್ ನಲ್ಲಿ ಫೈಲ್ ಗಳನ್ನು ಅಪ್ಲೋಡ್ ಮಾಡಲು, ಡೌನ್ ಲೋಡ್ ಮಾಡಲು ಮತ್ತು ಶೇರ್ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ವರದಿಯಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)