varthabharthi


ಮಾಹಿತಿ - ಮಾರ್ಗದರ್ಶನ

ಮಂಗಳೂರು: ವಿವಿಧ ತಾತ್ಕಾಲಿಕ ಹುದ್ದೆ; ಆ.25ರಂದು ನೇರ ಸಂದರ್ಶನ

ವಾರ್ತಾ ಭಾರತಿ : 20 Aug, 2020

ಮಂಗಳೂರು, ಆ.20: ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಕೋವಿಡ್-19 ನಿಯಂತ್ರಣ ಕಾರ್ಯಕ್ರಮದಡಿಯಲ್ಲಿ ಸಂಚಾರಿ ಕ್ಷಿಪ್ರ ಪ್ರತಿಜನಕ ಪರೀಕ್ಷೆ ನಡೆಸಲು ಅಗತ್ಯವಿರುವ ತಂಡಗಳಿಗೆ ಪ್ರಯೋಗಶಾಲಾ ತಂತ್ರಜ್ಞರು ಹಾಗೂ ಡಾಟಾ ಎಂಟ್ರಿ ಅಪರೇಟರ್‌ಗಳನ್ನು ಗುತ್ತಿಗೆ ಆಧಾರದಲ್ಲಿ ನೇಮಕಕ್ಕೆ ನೇರ ಸಂದರ್ಶನ ಕರೆಯಲಾಗಿದೆ.

ತಾತ್ಕಾಲಿಕವಾಗಿ 6 ತಿಂಗಳ ಮಟ್ಟಿಗೆ ನೇಮಕ ಮಾಡಿಕೊಳ್ಳಲು ಆ.25ರಂದು ಬೆಳಗ್ಗೆ 11 ಗಂಟೆಗೆ ದ.ಕ. ಜಿಪಂ ಆವರಣ, ನೇತ್ರಾವತಿ ಸಭಾಂಗಣ ನೇರ ಸಂದರ್ಶನ ನಡೆಸಲಾಗುವುದು.

ಹುದ್ದೆ ವಿವರ: ಪ್ರಯೋಗ ಶಾಲಾ ತಂತ್ರಜ್ಞರು, ಸಂಖ್ಯೆ- 51, ಮಾಸಿಕ ವೇತನ- 10,000+15 ರೂ.. ವಿದ್ಯಾರ್ಹತೆ- ಎಂ.ಎಲ್.ಟಿ./ಡಿ.ಎಂ.ಎಲ್.ಟಿ ಬಿ.ಎಸ್‌ಸಿ. -ಎಂ.ಎಲ್.ಟಿ. ಇವರಿಗೆ ಪ್ರಥಮ ಆದ್ಯತೆ. ನರ್ಸಿಂಗ್/ಅರೆ ವೈದ್ಯಕೀಯ ಪದವೀಧರರು ಮತ್ತು ವಿಜ್ಞಾನ ಪದವೀಧರರು ಇವರಿಗೆ ಎರಡನೇ ಆದ್ಯತೆ.

ಹುದ್ದೆ ವಿವರ: ದತ್ತಾಂಶ ನಮೂದಕರು (ಡಾಟಾ ಎಂಟ್ರಿ ಅಪರೇಟರ್) ಸಂಖ್ಯೆ- 51, ಮಾಸಿಕ ವೇತನ- 14,000 ರೂ., ವಿದ್ಯಾರ್ಹತೆ-ಪಿಯುಸಿ ಮತ್ತು 6 ತಿಂಗಳ ಬೇಸಿಕ್ ತರಬೇತಿ ಪ್ರಮಾಣ ಪತ್ರ ಹೊಂದಿರಬೇಕು.

ಹೆಚ್ಚಿನ ಮಾಹಿತಿಯನ್ನು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕಚೇರಿ ದ.ಕ. ಮಂಗಳೂರು ಇಲ್ಲಿನ ಕಚೇರಿ ವೇಳೆಯಲ್ಲಿ ಭೇಟಿ ನೀಡಲು ಪ್ರಕಟನೆ ತಿಳಿಸಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)