varthabharthi


ಓ ಮೆಣಸೇ

ಓ ಮೆಣಸೇ...

ವಾರ್ತಾ ಭಾರತಿ : 7 Sep, 2020
ಪಿ.ಎ.ರೈ

ಕೊಳಗೇರಿ ಮುಕ್ತ ಕರ್ನಾಟಕ ನಮ್ಮ ಸರಕಾರದ ಕನಸಾಗಿದೆ
 -ವಿ. ಸೋಮಣ್ಣ , ಸಚಿವ

 ಬಿಜೆಪಿ ಪಕ್ಷದಿಂದಲೇ ಅದು ಆರಂಭವಾಗಲಿ.

ಪಾಶ್ಚಾತ್ಯರ ಜೀವನ ವಿಧಾನದಿಂದ ನಿಸರ್ಗದ ಮೇಲಿನ ನಮ್ಮ ನೋಟಗಳೇ ಬದಲಾಗಿವೆ
- ಮೋಹನ್ ಭಾಗವತ್, ಆರೆಸ್ಸೆೆಸ್ ಮುಖಂಡ
ಮನುಷ್ಯನ ಮೇಲು ಕೀಳು ಜಾತಿಗಳ ಕುರಿತಂತೆ ನಮ್ಮ ನೋಟಗಳು ಬದಲಾಗಿರುವ ಬಗ್ಗೆ ಅನುಮಾನವೇ ಇಲ್ಲ.

ಕಾಂಗ್ರೆಸ್‌ಗೆ ಚುನಾಯಿತ ಅಧ್ಯಕ್ಷರು ಇಲ್ಲದಿದ್ದರೆ ಆಕಾಶವೇನೂ ಕಳಚಿ ಬೀಳುವುದಿಲ್ಲ - ಸಲ್ಮಾನ್ ಖುರ್ಷಿದ್, ಕಾಂಗ್ರೆಸ್ ಮುಖಂಡ

ಕಾಂಗ್ರೆಸ್ ಎನ್ನುವ ಪಕ್ಷ ಇಲ್ಲದಿದ್ದರೂ ಆಕಾಶ ಕಳಚಿ ಬೀಳುವುದಿಲ್ಲ.

ಪ್ರಧಾನಿ ಮನ್ ಕಿ ಬಾತ್ ಭಾಷಣವು ಗೊಂಬೆಗಳ ಕುರಿತು ಹೇಳಲಷ್ಟೇ ಸೀಮಿತವಾಗಿದೆ - ರಾಹುಲ್ ಗಾಂಧಿ, ಕಾಂಗ್ರೆಸ್ ನಾಯಕ

ಅವರೇ ಒಂದು ಸೂತ್ರದ ಗೊಂಬೆ. ಆಡಿಸುವಾತ ಮೇಲೊಬ್ಬ ಅಂಬಾನಿಯಿದ್ದಾನೆ.

ದೇಶೀ ಗೋವನ್ನು ಸಾಕಿಕೊಂಡಿದ್ದವರು ಈತನಕ ಆತ್ಮಹತ್ಯೆ ಮಾಡಿಕೊಂಡಿಲ್ಲ -ರಾಘವೇಶ್ವರ ಭಾರತಿ ಸ್ವಾಮೀಜಿ, ರಾಮ ಚಂದ್ರಾಪುರ ಮಠ

 ಆತ್ಯಹತ್ಯೆ ಮಾಡಿಕೊಳ್ಳದ ಅಪರಾಧಕ್ಕಾಗಿ ನಕಲಿ ಗೋರಕ್ಷಕರಿಂದ ಕಿರುಕುಳವೆ?

 ಪ್ರಕೃತಿಯಲ್ಲಿ ಪರಮಾತ್ಮನನ್ನು ಕಂಡುಕೊಳ್ಳದವರು ಬೇರೆಲ್ಲೂ ಕಂಡುಕೊಳ್ಳಲು ಸಾಧ್ಯವಿಲ್ಲ
- ರವಿಶಂಕರ್ ಗುರೂಜಿ, ಆರ್ಟ್ ಆಫ್ ಲಿವಿಂಗ್ ಸಂಸ್ಥಾಪಕ
ಕೆಲವು ಪರಮಾತ್ಮನ ಹೆಸರಿನಲ್ಲಿ ಕೋಟ್ಯಂತರ ದುಡ್ಡನ್ನು ಕಂಡುಕೊಳ್ಳುತ್ತಾರೆ.

ದೇಶದ ಯಾವುದೇ ಭಾಷೆಯಲ್ಲಿ ನಡೆಯಲಾರದೇ ಇರುವಂತಹ ಅತ್ಯದ್ಭುತ ಪವಾಡ 12ನೇ ಶತಮಾನದ ಶರಣ ಚಳವಳಿ - ಡಾ. ಚಂದ್ರಶೇಖರ್ ಕಂಬಾರ, ಸಾಹಿತಿ

ನಿಮ್ಮದು ಸಂಘಪರಿವಾರಕ್ಕೆ ಶರಣಾಗತಿ ಚಳವಳಿ ಇರಬೇಕು.


ಭಾರತೀಯರಾಗಿ ನಾವು ಗೋ ಹತ್ಯೆ ಮಾಡಬಾರದು

- ಡಾ.ಕೆ.ಸುಧಾಕರ್, ಸಚಿವ
ಮನುಷ್ಯರ ಹತ್ಯೆಯನ್ನು ಮಾಡಲು ಪರವಾನಿಗೆ ಇದೆಯೆ?

  ಡ್ರಗ್ಸ್ ಜಾಲವನ್ನು ಬುಡ ಸಮೇತ ಕಿತ್ತು ಹಾಕಲಾಗುವುದು
- ಬಸವರಾಜ ಬೊಮ್ಮಾಯಿ, ಸಚಿವ
ಅದರ ಬುಡ ಬಿಜೆಪಿ ಕಚೇರಿಯೊಳಗೆ ಇರಬಹುದು. ಎಚ್ಚರಿಕೆ ಇರಲಿ.

ಗಾಂಜಾ ಸೇವನೆ ಅಧ್ಯಾತ್ಮ ಜೀವನದ ಒಂದು ಭಾಗ, ಆದ್ದರಿಂದ ಗಾಂಜಾ ಬಳಸುವುದನ್ನು ಸರಕಾರ ಕಾನೂನು ಬದ್ಧಗೊಳಿಸಬೇಕು -ನಿವೇದಿತಾ, ನಟಿ

 ಕೊತ್ತಂಬರಿ ಸೊಪ್ಪಿಗೆ ನಿಷೇಧ ಹೇರಿ, ಗಾಂಜಾವನ್ನೇ ಅಡುಗೆಗೆ ಬಳಸಿದರೆ ಹೇಗೆ?

 ಬಾರ್-ರೆಸ್ಟೋರೆಂಟ್ ಆರಂಭಗೊಂಡಿರುವುದರಿಂದ ಈಗ ನಿತ್ಯ 80 ಕೋ. ರೂ. ಆದಾಯ ಬರುತ್ತಿದೆ -ಎಚ್. ನಾಗೇಶ್, ಸಚಿವ
 ಜನರ ಆದಾಯ ಹೆಚ್ಚಿದ ಬಗ್ಗೆ ಏನಾದರೂ ಮಾಹಿತಿ ಇದೆಯೆ?

ಡ್ರಗ್ಸ್ ಮಾಫಿಯಾವನ್ನು ಪೊಲೀಸರಿಂದ ಹತೋಟಿಗೆ ತರಲು ಸಾಧ್ಯವಾಗದಿದ್ದರೆ ನಾನು ಮಾಡಿ ತೋರಿಸುತ್ತೇನೆ -ಪ್ರಮೋದ್ ಮುತಾಲಿಕ್, ಶ್ರೀರಾಮ ಸೇನೆ ಅಧ್ಯಕ್ಷ
ನೀವು ಸಮಾಜಕ್ಕೆ ಹಂಚುತ್ತಿರುವ ಡ್ರಗ್ಸ್ ಇನ್ನೂ ಅಪಾಯಕಾರಿಯಾದುದು.

ಕಾಂಗ್ರೆಸ್ ಪಕ್ಷ ಈಗ ವೃದ್ಧಾಶ್ರಮದಂತಾಗಿದೆ

 - ನಳಿನ್ ಕುಮಾರ್ ಕಟೀಲು, ಸಂಸದ

ಯಡಿಯೂರಪ್ಪರನ್ನು ಅಲ್ಲಿ ಸೇರಿಸುವ ಉದ್ದೇಶವೇನಾದರೂ ಇದೆಯೆ?

 ಔಷಧ ಮರು ಬಳಕೆ ಕುರಿತು ಸಹ ಚಿಂತನೆ ಅಗತ್ಯ
- ಡಿ.ವಿ. ಸದಾನಂದಗೌಡ, ಕೇಂದ್ರ ಸಚಿವ

 ಡ್ರಗ್ಸ್ ಮಾಫಿಯಾದ ಜೊತೆಗೆ ಈ ಕುರಿತಂತೆ ವಿಶೇಷ ಮಾತುಕತೆ ನಡೆಸಿ.

ಯುವಕರು ಭಯೋತ್ಪಾದನೆಯತ್ತ ಹೊರಳದಂತೆ ತಡೆಯಬೇಕು
- ನರೇಂದ್ರ ಮೋದಿ, ಪ್ರಧಾನಿ
 ಪ್ರಜ್ಞಾ ಸಿಂಗ್ ಠಾಕೂರ್ ನೇತೃತ್ವದಲ್ಲಿ ಅದಕ್ಕಾಗಿ ಒಂದು ತಂಡವನ್ನು ರಚಿಸಿ. 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)

ಇನ್ನಷ್ಟು ಓ ಮೆಣಸೇ ಸುದ್ದಿಗಳು