varthabharthi


ಗಲ್ಫ್ ಸುದ್ದಿ

ಸ್ವತಂತ್ರ ಫೆಲೆಸ್ತೀನ್ ದೇಶ ಸ್ಥಾಪನೆಗೆ ಬೆಂಬಲ: ಸೌದಿ ಅರೇಬಿಯಾ

ವಾರ್ತಾ ಭಾರತಿ : 17 Sep, 2020

ರಿಯಾದ್ (ಸೌದಿ ಅರೇಬಿಯ), ಸೆ. 17: ತಾನು ಫೆಲೆಸ್ತೀನ್ ಜನರ ಪರವಾಗಿ ನಿಲ್ಲುತ್ತೇವೆ ಹಾಗೂ ಫೆಲೆಸ್ತೀನ್ ವಿವಾದಕ್ಕೆ ನ್ಯಾಯಯುತ ಮತ್ತು ಸಮಗ್ರ ಪರಿಹಾರವೊಂದನ್ನು ರೂಪಿಸುವ ನಿಟ್ಟಿನಲ್ಲಿ ಮಾಡಲಾಗುವ ಎಲ್ಲ ಪ್ರಯತ್ನಗಳನ್ನು ಬೆಂಬಲಿಸುತ್ತೇವೆ ಎಂದು ಸೌದಿ ಅರೇಬಿಯ ಮಂಗಳವಾರ ಹೇಳಿದೆ.

‘‘ಅಂತರ್‌ರಾಷ್ಟ್ರೀಯ ನಿರ್ಧಾರಗಳು ಮತ್ತು ಅರಬ್ ಶಾಂತಿ ಯೋಜನೆಗಳಿಗೆ ಅನುಗುಣವಾಗಿ, 1967ರಲ್ಲಿ ನಿಗದಿಪಡಿಸಲಾದ ಗಡಿಗಳ ಆಧಾರದಲ್ಲಿ ಪೂರ್ವ ಜೆರುಸಲೇಮನ್ನು ರಾಜಧಾನಿಯಾಗಿ ಹೊಂದಿರುವ ಸ್ವತಂತ್ರ ಫೆಲೆಸ್ತೀನ್ ದೇಶವೊಂದನ್ನು ಸ್ಥಾಪಿಸುವ ಫೆಲೆಸ್ತೀನ್ ಜನರ ಪ್ರಯತ್ನಗಳಿಗೆ ಬೆಂಬಲ ನೀಡುವುದನ್ನು ಸೌದಿ ಅರೇಬಿಯವು ಮುಂದುವರಿಸುವುದು’’ ಎಂದು ಸೌದಿ ಅರೇಬಿಯ ಸಚಿವ ಸಂಪುಟವು ಬಿಡುಗಡೆ ಮಾಡಿದ ಹೇಳಿಕೆಯೊಂದು ತಿಳಿಸಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)