varthabharthi


ರಾಷ್ಟ್ರೀಯ

ಐಪಿಎಲ್‌ನಲ್ಲಿ ಭಾಗಿಯಾಗಲು ಯುಎಇಗೆ ತಲುಪಿದ ಆಸ್ಟ್ರೇಲಿಯ,ಇಂಗ್ಲೆಂಡ್ ಆಟಗಾರರು

ವಾರ್ತಾ ಭಾರತಿ : 18 Sep, 2020

ದುಬೈ, ಸೆ.18:ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್)ಕ್ರಿಕೆಟ್ ಟೂರ್ನಿಯಲ್ಲಿ ಆಡಲು ಆಸ್ಟ್ರೇಲಿಯ ಹಾಗೂ ಇಂಗ್ಲೆಂಡ್ ತಂಡಗಳ ಆಟಗಾರರು ಗುರುವಾರ ಇಲ್ಲಿಗೆ ಬಂದು ತಲುಪಿದರು.ಐಪಿಎಲ್ ಶನಿವಾರ ಆರಂಭವಾಗಲಿದೆ.

ವಿವಿಧ ಫ್ರಾಂಚೈಸಿಗಳಲ್ಲಿ ಆಡುವ ಸ್ಟೀವ್ ಸ್ಮಿತ್,ಡೇವಿಡ್ ವಾರ್ನರ್,ಜೋಫ್ರಾ ಅರ್ಚರ್ ಹಾಗೂ ಜೋಸ್ ಬಟ್ಲರ್ ಸೇರಿದಂತೆ ಒಟ್ಟು 21 ಆಟಗಾರರು ಇಂಗ್ಲೆಂಡ್‌ನಿಂದ ವಿಶೇಷ ವಿಮಾನದ ಮೂಲಕ ದುಬೈ ತಲುಪಿದರು. ಆಸ್ಟ್ರೇಲಿಯ ಹಾಗೂ ಇಂಗ್ಲೆಂಡ್ ನಡುವಿನ ಏಕದಿನ ಸರಣಿಯು ಬುಧವಾರ ಮುಕ್ತಾಯವಾಗಿತ್ತು.

ವಾರ್ನರ್ ಹಾಗೂ ಕೆಲವು ಆಟಗಾರರು ಕೋವಿಡ್-19 ಸೋಂಕಿನ ಮುಂಜಾಗ್ರತೆಯಾಗಿ ಪಿಪಿಇ ಕಿಟ್ ಧರಿಸಿದ್ದರು. ಎಲ್ಲ ಆಟಗಾರರೂ ದುಬೈನಲ್ಲಿಕೋವಿಡ್ ಪರೀಕ್ಷೆಗೆ ಒಳಗಾಗಲಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)