varthabharthi


ರಾಷ್ಟ್ರೀಯ

ತನಗೆ ಕೊರೋನ ಇದೆ ಎಂದು ಪತ್ನಿಗೆ ತಿಳಿಸಿ ನಾಪತ್ತೆಯಾದಾತ ಗೆಳತಿಯೊಂದಿಗೆ ಪತ್ತೆ!

ವಾರ್ತಾ ಭಾರತಿ : 18 Sep, 2020

ಮುಂಬೈ, ಸೆ.18: ತನಗೆ ಕೊರೋನ ವೈರಸ್ ಸೋಂಕು ತಗಲಿದೆ ಎಂದು ತನ್ನ ಪತ್ನಿಗೆ ತಿಳಿಸಿ ನಾಪತ್ತೆಯಾಗಿದ್ದ ನವಿಮುಂಬೈನ 28ರ ವಯಸ್ಸಿನ ವ್ಯಕ್ತಿ ಮಂಗಳವಾರ ಗರ್ಲ್ ಫ್ರೆಂಡ್‌ನೊಂದಿಗೆ ಪತ್ತೆಯಾಗಿರುವ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಜುಲೈ 24ರಂದು ಪತ್ನಿಗೆ ಫೋನ್ ಮಾಡಿದ್ದ ವ್ಯಕ್ತಿ, ನನಗೆ ಕೊರೋನ ವೈರಸ್ ತಗಲಿರುವುದು ದೃಢಪಟ್ಟಿದೆ. ನಾನು ಇನ್ನು ಬದುಕಲಾರೆ ಎಂದು ಹೇಳಿದ್ದ. ಪತ್ನಿ ಇನ್ನಷ್ಟು ಪ್ರಶ್ನೆ ಕೇಳುವ ಮೊದಲೇ ಫೋ ನ್ ಕರೆ ಕಟ್ ಮಾಡಿದ್ದ. ಆ ನಂತರ ಆತನ ಪತ್ನಿ ಸಹೋದರನ ಜೊತೆ ಪೊಲೀಸ್ ಠಾಣೆಗೆ ತೆರಳಿ ಪತಿ ನಾಪತ್ತೆಯಾಗಿರುವುದಾಗಿ ದೂರು ನೀಡಿದ್ದರು.

 ನಾಪತ್ತೆಯಾಗಿದ್ದ ವ್ಯಕ್ತಿಯ ಬೈಕ್, ಹೆಲ್ಮೆಟ್, ಬ್ಯಾಗ್ ಹಾಗೂ ಕೀ ವಾಶಿಯ ಸೆಕ್ಟರ್ 17ರಲ್ಲಿ ರಸ್ತೆ ಬದಿ ಪತ್ತೆಯಾಗಿತ್ತು. ಆದರೆ ಪೊಲೀಸರಿಗೆ ಆತ ಎಲ್ಲಿದ್ದನೆಂಬ ಸುಳಿವು ಸಿಕ್ಕಿರಲಿಲ್ಲ. ಹತ್ತಿರದ ಭದ್ರತಾ ಕ್ಯಾಮರಾವನ್ನು ಪರಿಶೀಲಿಸಿದ್ದ ಪೊಲೀಸರು ವ್ಯಕ್ತಿಯ ಮೊಬೈಲ್ ಸ್ಥಳವನ್ನು ಪತ್ತೆ ಹಚ್ಚಲು ಯತ್ನಿಸಿದ್ದರು. ವ್ಯಕ್ತಿ ಎರಡು ಬಾರಿ ರಾತ್ರಿ ವೇಳೆ 100ರ ಸಂಖ್ಯೆಗೆ ಫೋನ್ ಮಾಡಿದ್ದ. ಹೀಗಾಗಿ ಪೊಲೀಸರು ದರೋಡೆ ನಡೆದಿರುವ ಸಾಧ್ಯತೆಯ ಆಯಾಮದತ್ತ ತನಿಖೆ ನಡೆಸಿದ್ದರು. ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ ಬಳಿಕ ವ್ಯಕ್ತಿಗೆ ಅಕ್ರಮ ಸಂಬಂಧ ವಿರುವುದು ಹಾಗೂ ವ್ಯಕ್ತಿ ಇಂದೋರ್‌ನಲ್ಲಿರುವ ವಿಚಾರ ಕಂಡುಬಂತು.

 ವಾಶಿಯ ಪೊಲೀಸ್ ಅಧಿಕಾರಿಗಳ ತಂಡ ಇಂದೋರ್‌ಗೆ ತೆರಳಿ ನಾಪತ್ತೆಯಾದ ವ್ಯಕ್ತಿಯನ್ನು ಗೆಳತಿಯೊಂದಿಗೆ ಸೆರೆ ಹಿಡಿದಿದ್ದಾರೆ. ಸೆ.15ರಂದು ವ್ಯಕ್ತಿಯನ್ನು ಮುಂಬೈಗೆ ಕರೆ ತಂದಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)