varthabharthi


ಕ್ರೀಡೆ

ಇಟಾಲಿಯನ್ ಓಪನ್ನೊ: ವಾಕ್ ಜೊಕೊವಿಕ್ ಕ್ವಾರ್ಟರ್ ಫೈನಲ್‌ಗೆ

ವಾರ್ತಾ ಭಾರತಿ : 19 Sep, 2020

ರೋಮ್: ಇಟಾಲಿಯನ್ ಓಪನ್ ಟೆನಿಸ್‌ನ ಪುರುಷರ ವಿಭಾಗದ ಸಿಂಗಲ್ಸ್‌ನಲ್ಲಿ ವಿಶ್ವದ ನಂಬರ್ ಒನ್ ತಾರೆ ನೊವಾಕ್ ಜೊಕೊವಿಕ್ ಅವರು ತನ್ನ ಸರ್ಬಿಯ ದೇಶದ ಸಹ ಆಟಗಾರ ಫಿಲಿಪ್ ಕ್ರಜಿನೋವಿಕ್ ಅವರನ್ನು ಮಣಿಸಿ ಶುಕ್ರವಾರ ನ ಕ್ವಾರ್ಟರ್ ಫೈನಲ್‌ಗೆ ಮುನ್ನಡೆದರು.

 33ರ ಹರೆಯದವರು ಜೊಕೊವಿಕ್ ಅವರು ಫಿಲಿಪ್‌ರನ್ನು 7-6 (9/7), 6-3 ಅಂತರದಲ್ಲಿ ಮಣಿಸಿದರು.

ಮುಂದಿನ ಸುತ್ತಿನಲ್ಲಿ ಅವರಿಗೆ ಇಟಲಿಯ ಲೊರೆಂಜೊ ಮುಸೆಟ್ಟಿ ಅಥವಾ ಜರ್ಮನಿಯ ಡೊಮಿನಿಕ್ ಕೊಯೆಫೆರ್ ಸವಾಲು ಎದುರಾಗಲಿದೆ. ಇಬ್ಬರೂ ಅರ್ಹತಾ ಸುತ್ತಿನ ಮೂಲಕ ಪ್ರಧಾನ ಸುತ್ತಿಗೆ ಬಂದವರು. ಜೊಕೊವಿಕ್ - ಯುಎಸ್ ಓಪನ್‌ನಿಂದ ಅನರ್ಹಗೊಳ್ಳುವ ಮೊದಲು ಈ ಋತುವಿನಲ್ಲಿ ಅಜೇಯರಾಗಿದ್ದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)