varthabharthi


ಅಂತಾರಾಷ್ಟ್ರೀಯ

ಅಮೆರಿಕ ಸುಪ್ರೀಂಕೋರ್ಟ್ ನ್ಯಾಯಾಧೀಶೆ ಗಿನ್ಸ್‌ಬರ್ಗ್ ನಿಧನ

ವಾರ್ತಾ ಭಾರತಿ : 19 Sep, 2020

ಫೋಟೊ ಕೃಪೆ: twitter.com

ವಾಶಿಂಗ್ಟನ್,ಸೆ.19: ಉದಾರವಾದಿ ನಿಲುವುಗಳಿಂದ ಜನಪ್ರಿಯರಾಗಿದ್ದ ಅಮೆರಿಕದ ಸುಪ್ರೀಂಕೋರ್ಟ್‌ನ ನ್ಯಾಯಮೂರ್ತಿ ರುತ್ ಬ್ಯಾಡರ್ ಗಿನ್ಸ್‌ಬರ್ಗ್ ಅವರು ಶನಿವಾರ ನಿಧನರಾಗಿದ್ದಾರೆ. ಅವರಿಗೆ 87 ವರ್ಷ ವಯಸ್ಸಾಗಿತ್ತು.

  ‘ನೋಟೊರಿಯಸ್ (ಕುಖ್ಯಾತ) ಆರ್‌ಬಿಜಿ’ ಎಂದೇ ಅಭಿಮಾನಿಗಳಿಂದ ಕರೆಯಿಸಿಕೊಳ್ಳುತ್ತಿದ್ದ ಗಿನ್ಸ್‌ಬರ್ಗ್ ಅವರು ಅಮೆರಿಕ ಸುಪ್ರೀಂಕೋರ್ಟ್‌ನ 9 ಮಂದಿ ನ್ಯಾಯಮೂರ್ತಿಗಳ ಪೈಕಿ ಅತ್ಯಂತ ಹಿರಿಯ ವಯಸ್ಸಿನವರು.ಕಳೆದ ಕೆಲವು ಸಮಯದಿಂದ ಪ್ಯಾನ್‌ಕ್ರಿಯಾಟಿಕ್ (ಮೆದೋಜ್ಜೀರಕಗ್ರಂಥಿ) ಕ್ಯಾನ್ಸರ್‌ನಿಂದ ಬಳಲುತ್ತಿದ್ದ ರು. ಶನಿವಾರ ಅವರು ಸ್ವಗೃಹದಲ್ಲಿ ಕೊನೆಯುಸಿರೆಳೆದಿದ್ದಾರೆಂದು ಕುಟುಂಬ ಸದಸ್ಯರು ತಿಳಿಸಿದ್ದಾರೆ.

 ಅಮೆರಿಕದ ಅಧ್ಯಕ್ಷೀಯ ಚುನಾವಣೆಗೆ ಕೇವಲ 46 ದಿನಗಳಿರುವಂತೆಯೇ,ಗಿನ್ಸ್‌ಬರ್ಗ್ ನಿಧನದಿಂದಾಗಿ ನ್ಯಾಯಾಲಯದಲ್ಲಿ ಸಂಪ್ರದಾಯವಾದಿಗಳ ಪ್ರಾಬಲ್ಯ ಅಧಿಕವಾಗುವ ಸೂಚನೆಗಳು ಕಂಡುಬರುತ್ತಿವೆ. ಕಳೆದ ಎರಡು ವರ್ಷಗಳಿಂದ ಗಿನ್ಸ್‌ಬರ್ಗ್ ಅಸ್ವಸ್ಥರಾಗಿ ಆಸ್ಪತ್ರೆಯಲ್ಲೇ ಇದ್ದರೂ ಮಲಗಿದಲ್ಲಿಂದಲೇ ಅವರು ಪ್ರಕರಣಗಳು ವಾದಗಳನ್ನು ಅಲಿಸುತ್ತಿದ್ದರು ಹಾಗೂ ತನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದರು.

ಗಿನ್ಸ್‌ಬರ್ಗ್ ಅವರ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿ ನೂರಾರು ಅಭಿಮಾನಿಗಳು ವಾಶಿಂಗ್ಟನ್‌ನಲ್ಲಿರುವ ಅಮೆರಿಕದ ಸುಪ್ರೀಂಕೋರ್ಟ್‌ನ ಮುಂದೆ ಪುಷ್ಪಗುಚ್ಛಗಳನ್ನಿರಿಸಿದರು ಹಾಗೂ ಮೊಂಬತ್ತಿಗಳನ್ನು ಬೆಳಗಿದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)