varthabharthi


ಗಲ್ಫ್ ಸುದ್ದಿ

ಕುವೈತ್‌ : ಇಂಡಿಯನ್ ಡಾಕ್ಟರ್ಸ್ ಫೋರಮ್ ಅಧ್ಯಕ್ಷರಾಗಿ ಡಾ.ಆಮಿರ್ ಅಹ್ಮದ್ ಆಯ್ಕೆ

ವಾರ್ತಾ ಭಾರತಿ : 20 Sep, 2020

ಕುವೈತ್, ಸೆ. 20: ಕುವೈತ್‌ನ ಇಂಡಿಯನ್ ಡಾಕ್ಟರ್ಸ್ ಫೋರಮ್ (ಐಡಿಎಫ್) 2020-22ರ ಸಾಲಿನ ನೂತನ ಅಧ್ಯಕ್ಷರಾಗಿ ಡಾ. ಆಮಿರ್ ಅಹ್ಮದ್ ಆಯ್ಕೆಯಾಗಿದ್ದಾರೆ.

ಇಂಡಿಯನ್ ಡಾಕ್ಟರ್ಸ್ ಫೋರಮ್ 2004ರಲ್ಲಿ ಸ್ಥಾಪನೆಯಾಗಿದ್ದು, ಇದು ಕುವೈತ್‌ನ ಮೆಡಿಕಲ್ ಅಸೋಸಿಯೇಶನ್‌ನ ಅಂಗ ಸಂಸ್ಥೆಯಾಗಿದೆ. ಸರಕಾರಿ ಹಾಗೂ ಖಾಸಗಿ ಆಸ್ಪತ್ರೆಗಳು ಹಾಗೂ ಕ್ಲಿನಿಕ್‌ಗಳಲ್ಲಿ ಕೆಲಸ ಮಾಡುತ್ತಿರುವ 500 ಕ್ಕೂ ಅಧಿಕ ವೈದ್ಯರು ಐಡಿಎಫ್‌ನಲ್ಲಿದ್ದಾರೆ. ಭಾರತೀಯ ನಿವಾಸಿಗಳು ಹಾಗೂ ಇತರರಿಗಾಗಿ ಐಡಿಎಫ್ ಕುವೈತ್‌ನಲ್ಲಿ ನೂರಾರು ಉಚಿತ ವೈದ್ಯಕೀಯ ಶಿಬಿರಗಳನ್ನು ನಡೆಸಿದೆ.

ಕೋವಿಡ್-19ರ ಸಮಯದಲ್ಲಿ ಜನರಿಗಾಗಿ ಕುವೈತ್‌ನ ಹಲವು ಭಾರತೀಯ ಸಂಸ್ಥೆಗಳ ಸಹಯೋಗದಲ್ಲಿ ಉಚಿತ ವೈದ್ಯಕೀಯ ಸಮಾಲೋಚನ ಶಿಬಿರಗಳು, ಕೌನ್ಸಲಿಂಗ್ ಹಾಗೂ ವೆಬಿನಾರ್‌ಗಳನ್ನು ಆಯೋಜಿಸಿದೆ ಎಂದು ತಿಳಿಸಿದರು.

2020-22ರ ಸಾಲಿಗೆ ನೂತನ ಪದಾಧಿಕಾರಿಗಳಾಗಿ ಆಯ್ಕೆಮಾಡಲಾಯಿತು.

ಅಧ್ಯಕ್ಷರಾಗಿ ಡಾ. ಆಮಿರ್ ಅಹ್ಮದ್, ಉಪಾಧ್ಯಕ್ಷರುಗಳಾಗಿ ಡಾ. ಸಾಜ್ನಾ ಮುಹಮ್ಮದ್, ಡಾ. ಸುನೀಲ್ ಯಾದವ್, ಪ್ರಧಾನ ಕಾರ್ಯದರ್ಶಿಯಾಗಿ ಡಾ. ನಝಿಮ್ ಪಾರ್ಕರ್, ಜೊತೆ ಪ್ರಧಾನ ಕಾರ್ಯದರ್ಶಿಯಾಗಿ ಡಾ. ಅನಿಲಾ ಅಂಥೋನಿ, ಖಜಾಂಚಿಯಾಗಿ ಡಾ. ಜಗನ್ನಾಥ್, ಜೊತೆ ಖಜಾಂಚಿ ಡಾ. ಅಸಿತ್ ಮೊಹಾಂತಿ, ಸಮುದಾಯ ಕಲ್ಯಾಣ ಕಾರ್ಯದರ್ಶಿಯಾಗಿ ಡಾ. ಸುಸೊವನ ಸುಜಿತ್, ಸಮುದಾಯ ಕಲ್ಯಾಣದ ಜಂಟಿ ಕಾರ್ಯದರ್ಶಿ ಡಾ. ಬುರ್ಹಾನ್ ಶಬ್ಬೀರ್, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಡಾ.ಅಪರ್ಣಾ ಭಟ್, ಜೊತೆ ಸಾಂಸ್ಕೃತಿಕ ಕಾರ್ಯದರ್ಶಿ ಡಾ. ಥಾಮಸ್ ಕೋಶಿ, ಸದಸ್ಯತ್ವ ಕಾರ್ಯದರ್ಶಿಯಾಗಿ ಡಾ. ಸಾಹೆದ್ ಪಠಾಣ್, ಜೊತೆ ಸದಸ್ವತ್ವ ಕಾರ್ಯದರ್ಶಿ ಡಾ. ಮೆಹಬೂಬ್ ಖಾನ್, ವೆಬ್ ಸೆಕ್ರಟರಿಯಾಗಿ ಡಾ. ರಾಜಾಗುರು ಪರಮಾಗುರು, ಜೊತೆ ವೆಬ್ ಸೆಕ್ರಟರಿ ಡಾ. ಆರತಿ ಚಧಾ ಆಯ್ಕೆಯಾಗಿದ್ದಾರೆ.

ಭಾರತೀಯ ಡಾಕ್ಟರ್ಸ್ ಫೋರಮ್ (ಐಡಿಎಫ್) ಭಾರತೀಯ ಸರಕಾರವು ಸಾಗರೋತ್ತರ ಎನ್‌ಆರ್‌ಐ ಸಂಸ್ಥೆಯನ್ನು ಗುರುತಿಸಿ ನೀಡುವ ಪ್ರವಾಸಿ ಭಾರತೀಯ ಸಮ್ಮಾನ್ ಪ್ರಶಸ್ತಿಯನ್ನು 2013ರಲ್ಲಿ ಆಗಿನ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರಿಂದ ಸ್ವೀಕರಿಸಿತ್ತು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)