varthabharthi


ನಿಧನ

ಸುಮ್ಮಗುತ್ತು ನೇಮಿರಾಜ

ವಾರ್ತಾ ಭಾರತಿ : 20 Sep, 2020

ಮಂಗಳೂರು : ಕಾರ್ಕಳ ಹಾಗೂ ಬಂಟ್ವಾಳ ತಾಲೂಕಿನ ವಿವಿಧ ಶಾಲೆಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಸುಮ್ಮಗುತ್ತು ನೇಮಿರಾಜ ಕಟ್ಟಡ (88) ಅನಾರೋಗ್ಯದಿಂದ ಕಾರ್ಕಳ ತಾಲೂಕು ಇರ್ವತ್ತೂರಿನ ಸ್ವಗೃಹದಲ್ಲಿ ಸೆ.19ರಂದು ನಿಧನರಾದರು.

ಕಾರ್ಕಳ ಸಾಣೂರು ಪರಿಸರದಲ್ಲಿ “ನೇಮ್ರಾಜ ಮಾಷ್ಟ್ರು” ಎಂದೇ ಪ್ರಸಿದ್ಧರಾಗಿದ್ದ ಅವರು ಬಜಗೋಳಿ, ರೆಂಜಾಳ, ಇರ್ವತ್ತೂರು ಹಾಗೂ ಸಾಣೂರು ಇಲ್ಲಿ ಪ್ರಾಥಮಿಕ ಶಾಲೆ ಮುಖ್ಯೋಪಾಧ್ಯಾಯರಾಗಿಯೂ, ಬಂಟ್ವಾಳ ತಾಲೂಕಿನ ಬೆಂಜನಪದವು ಹಾಗೂ ಕಾರ್ಕಳ ತಾಲೂಕಿನ ಸಾಣೂರು ಪ್ರೌಢಶಾಲೆಯಲ್ಲಿ ಪದವಿಧರ ಸಹಾಯಕರಾಗಿದ್ದು, ಸೇವೆ ಸಲ್ಲಿಸಿ 1990ರಲ್ಲಿ ನಿವೃತ್ತರಾದರು.

ಅವರು ಪತ್ನಿ, ವಿ.ವಿ.ಕಾಲೇಜಿನ ಪ್ರಾಂಶುಪಾಲ ಡಾ. ಉದಯ ಕುಮಾರ್ ಇರ್ವತ್ತೂರು ಸೇರಿದಂತೆ ಮೂವರು ಪುತ್ರರು, ಮೂವರು ಪುತ್ರಿಯರನ್ನು ಅಗಲಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)