varthabharthi


ಕರಾವಳಿ

ಡಿವೈಎಫ್ಐ ಬಾಳೆಪುಣಿ-ಕೈರಂಗಳ ಘಟಕ ಕಚೇರಿ ಉದ್ಘಾಟನೆ

ವಾರ್ತಾ ಭಾರತಿ : 20 Sep, 2020

ಮಂಗಳೂರು : ಡಿವೈಎಫ್ಐ ಬಾಳೆಪುಣಿ - ಕೈರಂಗಳ ಘಟಕದ ಕಚೇರಿ ಉದ್ಘಾಟನೆಯನ್ನು ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಅವರು ನೆರವೇರಿಸಿದರು. 

ಈ ಸಂದರ್ಭ ಡಿವೈಎಫ್ಐ ಬಾಳೆಪುಣಿ - ಕೈರಂಗಳ ಘಟಕ ಸಮಿತಿಯ ವತಿಯಿಂದ ಸಮಾಜ ಸೇವಕರಾದ ಕೃಷ್ಣಣ್ಣ ನಡಕ , ಇಸ್ಮಾಯಿಲ್ ಕಣಂತೂರು, ವಿಜಯ್ ಡಿಸೋಜಾ ಅವರನ್ನು ಸನ್ಮಾನಿಸಲಾಯಿತು.

ಸಮಾರಂಭದಲ್ಲಿ ಡಿವೈಎಫ್ಐ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್, ಡಿವೈಎಫ್ಐ ಉಳ್ಳಾಲ ವಲಯ ಸಮಿತಿಯ ಅಧ್ಯಕ್ಷ ಅಶ್ರಫ್ ಕೆಸಿ ರೋಡ್, ಕಾರ್ಯದರ್ಶಿ ಸುನಿಲ್ ತೇವುಲ,  ಡಿವೈಎಫ್ಐ ಜಿಲ್ಲಾ ಉಪಾಧ್ಯಕ್ಷ ರಫೀಕ್ ಹರೇಕಳ, ನಿತಿನ್ ಕುತ್ತಾರ್, ರಝಾಕ್ ಮೊಂಟೆಪದವು, ನಿತಿನ್ ಬಂಗೇರಾ, ಶ್ರೀನಾಥ್ ಕುಳಾಯಿ, ಡಿವೈಎಫ್ಐ ಮುಡಿಪು ಘಟಕದ ಅಧ್ಯಕ್ಷ ರಝಾಕ್ ಮುಡಿಪು , ದೇರಳಕಟ್ಟೆ ಘಟಕದ ಅಧ್ಯಕ್ಷ ನವಾಝ್ ಉರುಮಣೆ, ಕೊಲ್ಲರಕೋಡಿ ಘಟಕದ ಅಧ್ಯಕ್ಷ ಆಸಿಫ್ ಕೆಎಚ್, ರಾಣಿ ಅಬ್ಬಕ್ಕ ಬಸ್ಸು ನೌಕರರ ಸಂಘದ ಅಧ್ಯಕ್ಷ ಅಲ್ತಾಫ್ ಮುಡಿಪು , ಕಾರ್ಯದರ್ಶಿ ಜಗದೀಶ್ ನಾಯಕ್, ಹರೇಕಳ ಗ್ರಾಪಂ ಮಾಜಿ ಸದಸ್ಯ ಅಶ್ರಫ್ ಹರೇಕಳ, ಕಾರ್ಮಿಕ ಮುಂದಾಳು ಇಬ್ರಾಹಿಂ ಮದಕ, ಡಿವೈಎಫ್ಐ ಬಾಳೆಪುಣಿ ಕೈರಂಗಳ ಘಟಕದ ಅಧ್ಯಕ್ಷ  ಅಲಿ ಕಾಯಾರ್, ಕಾರ್ಯದರ್ಶಿ ಖಲಂದರ್ ನಂದರಪಡ್ಪು, ಕೋಶಾಧಿಕಾರಿ ನಝೀರ್ ತೋಟಾಲ್ ಮುಂತಾದವರು ಉಪಸ್ಥಿತರಿದ್ದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)