varthabharthi


ಕರಾವಳಿ

ರಿಯಾಯಿತಿ ದರದಲ್ಲಿ ಮೀನು, ಚಿಕನ್, ಮಟನ್ ಮಾರಾಟ

ಫಳ್ನೀರ್: ಎಂಎಫ್‌ಸಿ ಫ್ರೆಶ್ ಮಾರ್ಟ್‌ನಲ್ಲಿ ಇಂದಿನಿಂದ ‘ಬಿಗ್ ಫೆಸ್ಟ್’

ವಾರ್ತಾ ಭಾರತಿ : 21 Sep, 2020

ಮಂಗಳೂರು, ಸೆ.21: ಫಳ್ನೀರ್ ಪ್ಲಾಟಿನಂ ಟಾಕೀಸ್ ಆವರಣದಲ್ಲಿ ಇತ್ತೀಚೆಗೆ ಶುಭಾರಂಭಗೊಂಡ ‘ಎಂಎಫ್‌ಸಿ ಫ್ರೆಶ್ ಮಾರ್ಟ್’ನಲ್ಲಿ ಅತ್ಯಂತ ಕಡಿಮೆ ದರದ ಮಾರಾಟ ಮೇಳ ‘ಬಿಗ್ ಫೆಸ್ಟ್’ ಸೆ.21ರಿಂದ ಆರಂಭವಾಗಲಿದೆ.

 ‘ಬಿಗ್ ಫೆಸ್ಟ್’ನಲ್ಲಿ ಮಳೆಗಾಲದ ವಿಶೇಷ ಆಕರ್ಷಣೆ ಯಾಗಿ ಫಿಶ್, ಎಗ್, ಚಿಕನ್, ಮಟನ್ ಅತೀ ಕಡಿಮೆ ದರದಲ್ಲಿ ಗ್ರಾಹಕರಿಗೆ ಲಭ್ಯವಾಗಲಿದೆ. ಇದರ ಸದುಪಯೋಗ ಪಡೆದುಕೊಳ್ಳುವಂತೆ ‘ಎಂಎಫ್‌ಸಿ ಫ್ರೆಶ್ ಮಾರ್ಟ್’ ಮಾಲಕ ಸಿದ್ದೀಕ್ ಕನ್ಯಾನ ತಿಳಿಸಿದ್ದಾರೆ.

ಮೀನುಗಾರಿಕಾ ಋತು ಆರಂಭವಾಗುವುದರೊಂದಿಗೆ ಅತ್ಯಂತ ತಾಜಾ ಮೀನುಗಳು ಮಂಗಳೂರಿನ ಯಾವುದೇ ಮಾರುಕಟ್ಟೆಯಲ್ಲಿ ದೊರೆಯದಷ್ಟು ಕಡಿಮೆ ದರದಲ್ಲಿ ಎಂಎಫ್‌ಸಿ ಫ್ರೆಶ್ ಮಾರ್ಟ್‌ನಲ್ಲಿ ಲಭ್ಯವಾಗಲಿದೆ ಎಂದು ಪ್ರಕಟನೆ ತಿಳಿಸಿದೆ.

ಚಿಕನ್, ಮಟನ್ ಮತ್ತು ಮೊಟ್ಟೆ ಕೂಡ ಅತ್ಯಂತ ಕಡಿಮೆ ದರದಲ್ಲಿ ಲಭ್ಯವಿದ್ದು, ಸೆ.21ರಿಂದ 30ರವರೆಗೆ ಬಿಗ್ ಫೆಸ್ಟ್ ಇರಲಿದೆ.

ಈಗಾಗಲೇ ಜನಪ್ರಿಯತೆ ಪಡೆಯುತ್ತಿರುವ ‘ಎಂಎಫ್‌ಸಿ ಫ್ರೆಶ್ ಮಾರ್ಟ್’ನಲ್ಲಿ ತಾಜಾ ಮೀನು, ಮೊಟ್ಟೆ, ಚಿಕನ್ ಮತ್ತು ಮಟನ್ ಮಾರಾಟದ ಪ್ರತ್ಯೇಕ ಸ್ಟಾಲ್ ವ್ಯವಸ್ಥೆ ಇದೆ. ಇದಲ್ಲದೆ ನಮ್ಮಲ್ಲಿ ಹಣ್ಣು ಹಂಪಲು, ತರಕಾರಿ, ನಂದಿನಿ ಉತ್ಪನ್ನಗಳು, ಫ್ರೆಶ್ ಜ್ಯೂಸ್, ಕೋಲ್ಡ್ ಡ್ರಿಂಕ್ಸ್ ಹಾಗೂ ಎಂಎಫ್‌ಸಿ ಫುಡ್ ಐಟಂಗಳು ಮಾರಾಟಕ್ಕೆ ಲಭ್ಯವಿವೆ.

ಮಂಗಳೂರು ನಗರ ವ್ಯಾಪ್ತಿಯೊಳಗೆ ಫ್ರೀ ಹೋಂ ಡೆಲಿವರಿ ವ್ಯವಸ್ಥೆ ಕಲ್ಪಿಸಲಾಗಿದ್ದು, ಹೆಚ್ಚಿನ ಮಾಹಿತಿಗಾಗಿ ಮೊ.ಸಂ.: 9449251313, 9448981313ಗೆ ಸಂಪರ್ಕಿಸಬಹುದು ಎಂ.ಎಫ್.ಸಿ. ಮಾಲಕ ಸಿದ್ದೀಕ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)