varthabharthi


ರಾಷ್ಟ್ರೀಯ

ಮುಂಬೈ: ಕಟ್ಟಡ ಕುಸಿದು 10 ಮಂದಿ ಮೃತ್ಯು

ವಾರ್ತಾ ಭಾರತಿ : 21 Sep, 2020

ಮುಂಬೈ, ಸೆ.21: ಮುಂಬೈ ಸಮೀಪದ ಭಿವಂಡಿಯಲ್ಲಿ ಸೋಮವಾರ ಬೆಳಗ್ಗೆ ಮೂರು ಮಹಡಿಯ ಕಟ್ಟಡ ಕುಸಿದುಬಿದ್ದು ಹತ್ತು ಮಂದಿ ಮೃತಪಟ್ಟಿದ್ದರೆ, ಸುಮಾರು 25ಕ್ಕೂ ಅಧಿಕ ಜನರು ಸಿಲುಕಿ ಹಾಕಿಕೊಂಡಿರುವ ಭೀತಿ ಎದುರಾಗಿದೆ.

 ಆರಂಭಿಕ ಮಾಹಿತಿಯ ಪ್ರಕಾರ ಪಟೇಲ್ ಕಂಪೌಂಡ್ ಪ್ರದೇಶದಲ್ಲಿ ಕುಸಿದುಬಿದ್ದಿರುವ ಕಟ್ಟಡದೊಳಗಿಂದ 31 ಜನರನ್ನು ರಕ್ಷಿಸಲಾಗಿದೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ(ಎನ್‌ಡಿಆರ್‌ಎಫ್)ಮಗು ಸಹಿತ 11ಜನರನ್ನು ರಕ್ಷಿಸಿದೆ.

ಬೆಳಗ್ಗಿನ ಜಾವ 3:40ರ ಸುಮಾರಿಗೆ ಕಟ್ಟಡ ಕುಸಿದುಬಿದ್ದ ಬಳಿಕ ಸ್ಥಳೀಯರು ಕನಿಷ್ಠ 20 ಜನರನ್ನು ರಕ್ಷಿಸಿದ್ದಾರೆ. ಭಿವಂಡಿ ಕಟ್ಟಡ ಕುಸಿತ ಘಟನೆಯಲ್ಲಿ ಸಾವನ್ನಪ್ಪಿದವರ ಸಂಖ್ಯೆ 8ಕ್ಕೇರಿಕೆಯಾಗಿದೆ ಎಂದು ಥಾಣೆ ಮಹಾನಗರ ಪಾಲಿಕೆಯ ವಕ್ತಾರ ಹೇಳಿಕೆಯನ್ನು ಉಲ್ಲೇಖಿಸಿ ಸುದ್ದಿಸಂಸ್ಥೆ ಎಎನ್‌ಐ ವರದಿ ಮಾಡಿದೆ.

40 ವರ್ಷ ಹಳೆಯದಾದ ಕಟ್ಟಡದಲ್ಲಿ ಸುಮಾರು 20 ಕುಟುಂಬಗಳು ವಾಸವಾಗಿದ್ದವು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)