varthabharthi


ಕರಾವಳಿ

ಪುತ್ತೂರು: ದಾಖಲೆರಹಿತ 9250 ಕೆಜಿ ಅಕ್ಕಿ ವಶ; ಇಬ್ಬರ ಬಂಧನ

ವಾರ್ತಾ ಭಾರತಿ : 21 Sep, 2020

ಪುತ್ತೂರು, ಸೆ.21: ಸೂಕ್ತ ದಾಖಲೆಗಳಿಲ್ಲದೆ ಅಕ್ಕಿ ಸಾಗಾಟ ಮಾಡುತ್ತಿರುವುದನ್ನು ರವಿವಾರ ಪತ್ತೆ ಹಚ್ಚಿರುವ ನಗರ ಠಾಣಾ ಪೊಲೀಸರು ಸಾಗಾಟ ಮಾಡುತ್ತಿದ್ದ ಆರೋಪಿಗಳನ್ನು ಬಂಧಿಸಿ, ಅಕ್ಕಿ ಹಾಗೂ ಲಾರಿಯನ್ನು ವಶಪಡಿಸಿಕೊಂಡಿದ್ದಾರೆ.

ಲಾರಿ ಚಾಲಕ ಬೆಳ್ಳಾರೆ ಗ್ರಾಮದ ಕಾವಿನಮೂಲೆ ನಿವಾಸಿ ಖಲಂದರ್(31) ಹಾಗೂ ಸವಣೂರು ಗ್ರಾಮದ ಮಾಂತೂರು ನಿವಾಸಿ ಝಕಾರಿಯಾ(40) ಬಂಧಿತ ಆರೋಪಿಗಳು. ಇವರಿಂದ ಸುಮಾರು ಗೋಣಿಚೀಲದಲ್ಲಿ ತುಂಬಿಸಿದ್ದ ಅಂದಾಜು ಎರಡು ಲಕ್ಷ ರೂ. ಮೌಲ್ಯದ 9,250 ಕೆಜಿ ಅಕ್ಕಿ ವಶಪಡಿಸಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಸೆ.20ರಂದು ಮಾಣಿ-ಮೈಸೂರು ಹೆದ್ದಾರಿಯ ಪೋಳ್ಯದಲ್ಲಿ ಪೊಲೀಸರು ವಾಹನ ತಪಾಸಣೆ ನಡೆಸುತ್ತಿದ್ದ ವೇಳೆ ಲಾರಿಯಲ್ಲಿ ದಾಖಲೆರಹಿತವಾಗಿ ಅಕ್ಕಿ ಸಾಗಿಸುತ್ತಿರುವುದು ಪತ್ತೆಯಾಗಿದೆ.

ಅರೋಪಿಗಳ ವಿರುದ್ದ ಅಕ್ರಮ ದಾಸ್ತಾನು ಹಾಗೂ ಅಧಿಕ ಬೆಲೆ ಮಾರಾಟ ವಿರುದ್ಧ ಪ್ರಕರಣ ದಾಖಲಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)