varthabharthi


ಅಂತಾರಾಷ್ಟ್ರೀಯ

ಅಮೆರಿಕದೊಂದಿಗೆ ಸಂಪೂರ್ಣ ಕೈದಿ ವಿನಿಮಯಕ್ಕೆ ಇರಾನ್ ಸಿದ್ಧ: ವಿದೇಶ ಸಚಿವ ಘೋಷಣೆ

ವಾರ್ತಾ ಭಾರತಿ : 22 Sep, 2020

ಟೆಹರಾನ್ (ಇರಾನ್), ಸೆ. 22: ಅಮೆರಿಕದೊಂದಿಗೆ ಸಂಪೂರ್ಣ ಕೈದಿಗಳ ವಿನಿಮಯಕ್ಕೆ ಇರಾನ್ ಸಿದ್ಧವಾಗಿದೆ ಎಂದು ಆ ದೇಶದ ವಿದೇಶ ಸಚಿವ ಮುಹಮ್ಮದ್ ಜವಾದ್ ಝಾರಿಫ್ ಹೇಳಿದ್ದಾರೆ.

ಅವರು ಸೋಮವಾರ ನ್ಯೂಯಾರ್ಕ್‌ನಲ್ಲಿ ನಡೆದ ವಿದೇಶ ಸಂಬಂಧಗಳ ಮಂಡಳಿಯ ಸಭೆಯನ್ನು ಉದ್ದೇಶಿಸಿ ಆನ್‌ಲೈನ್‌ನಲ್ಲಿ ಮಾತನಾಡುತ್ತಿದ್ದರು.

2015ರಲ್ಲಿ ಇರಾನ್ ಜಗತ್ತಿನ ಪ್ರಭಾವಿ ದೇಶಗಳೊಂದಿಗೆ ಮಾಡಿಕೊಂಡ ಪರಮಾಣು ಒಪ್ಪಂದದಿಂದ ಅಮೆರಿಕ 2018ರಲ್ಲಿ ವಾಪಸ್ ಬಂದಂದಿನಿಂದ, ಈ ಎರಡು ದೇಶಗಳ ನಡುವಿನ ಸಂಬಂಧ ಹದಗೆಡುತ್ತಾ ಸಾಗಿದೆ.

ಇರಾನ್‌ನಲ್ಲಿ ಬಂಧನದಲ್ಲಿರುವ ಅಮೆರಿಕದ ಪ್ರಜೆಗಳನ್ನು ಬಿಡುಗಡೆ ಮಾಡುವಂತೆ ಅಮೆರಿಕ ತುಂಬಾ ಹಿಂದಿನಿಂದಲೂ ಒತ್ತಾಯಿಸುತ್ತಾ ಬಂದಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)