varthabharthi


ಕ್ರೀಡೆ

ಐಪಿಎಲ್: ಜಂಟಿ ವೇಗದ ಅರ್ಧಶತಕ ಸಿಡಿಸಿದ ಸ್ಯಾಮ್ಸನ್

ವಾರ್ತಾ ಭಾರತಿ : 22 Sep, 2020

 ಶಾರ್ಜಾ, ಸೆ.22:ಕೇವಲ 19 ಎಸೆತಗಳಲ್ಲಿ 6 ಭರ್ಜರಿ ಸಿಕ್ಸರ್‌ಗಳ ನೆರವಿನಿಂದ ಅರ್ಧಶತಕ ಸಿಡಿಸಿದ ರಾಜಸ್ಥಾನ ರಾಯಲ್ಸ್ ಬ್ಯಾಟ್ಸ್‌ಮನ್ ಸಂಜು ಸ್ಯಾಮ್ಸನ್ ಚೆನ್ನೈ ಸೂಪರ್ ಕಿಂಗ್ಸ್ ಬೌಲರ್‌ಗಳನ್ನು ಚೆಂಡಾಡಿದ್ದರು. ಈ ಮೂಲಕ ಐಪಿಎಲ್‌ನಲ್ಲಿ ರಾಜಸ್ಥಾನದ ಪರ ಜಂಟಿ ವೇಗದ ಅರ್ಧಶತಕ ಸಿಡಿಸಿದ ಸಾಧನೆಯನ್ನು ಮಾಡಿದರು.

2012ರಲ್ಲಿ ಆರ್‌ಸಿಬಿ ವಿರುದ್ಧ ಒವೈಸ್ ಶಾ ಕೂಡ 19 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದ್ದರು. ಜೋಸ್ ಬಟ್ಲರ್ ವೇಗವಾಗಿ ಅರ್ಧಶತಕ ಸಿಡಿಸಿರುವ ರಾಜಸ್ಥಾನ ರಾಯಲ್ಸ್ ಆಟಗಾರನಾಗಿದ್ದು, ಇವರು 2019ರಲ್ಲಿ ಡೆಲ್ಲಿ ವಿರುದ್ಧ ಕೇವಲ 18 ಎಸೆತಗಳಲ್ಲಿ 50 ರನ್ ಗಳಿಸಿದ್ದರು.  ಯಶಸ್ವಿ ಜೈಸ್ವಾಲ್ ಔಟಾದ ಬಳಿಕ ಕ್ರೀಸ್‌ಗೆ ಇಳಿದ ಸ್ಯಾಮ್ಸನ್ ಚೆನ್ನೈ ಸ್ಪಿನ್ನರ್‌ಗಳಾದ ರವೀಂದ್ರ ಜಡೇಜ ಹಾಗೂ ಪಿಯೂಷ್ ಚಾವ್ಲಾರನ್ನು ಚೆನ್ನಾಗಿ ದಂಡಿಸಿದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)