varthabharthi


ರಾಷ್ಟ್ರೀಯ

ಒಡಿಶಾ: ನಾಪತ್ತೆಯಾಗಿದ್ದ ಮಹಿಳೆ, ಗರ್ಭಿಣಿ ಪುತ್ರಿಯ ಮೃತದೇಹ ಪತ್ತೆ

ವಾರ್ತಾ ಭಾರತಿ : 23 Sep, 2020

ಸಾಂದರ್ಭಿಕ ಚಿತ್ರ

ಕೇಂದ್ರಪಾರ, ಸೆ. 23: ನಾಪತ್ತೆಯಾಗಿದ್ದ ಮಹಿಳೆ ಹಾಗೂ ಆಕೆಯ ಗರ್ಭಿಣಿ ಪುತ್ರಿಯ ಮೃತದೇಹ ಒಡಿಶಾದ ಕೇಂದ್ರಪಾರ ಜಿಲ್ಲೆಯ ಕುಗ್ರಾಮವೊಂದರ ರಸ್ತೆ ಬದಿ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇಬ್ಬರು ಮಹಿಳೆಯರ ಹತ್ಯೆಯಾಗಿದ್ದು, ಪೊಲೀಸರು ಆರೋಪಿಗಳನ್ನು ರಕ್ಷಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿ ಸ್ಥಳೀಯರು ಹಾಗೂ ಕುಟುಂಬದವರು ರಾಜನಗರ ಪೊಲೀಸ್ ಠಾಣಾ ವ್ಯಾಪ್ತಿಯ ಮಹುಲಿಯಾ ಪಂಚಾಯತ್‌ನ ಮನಪಾಡ ಗ್ರಾಮದಲ್ಲಿ ರವಿವಾರದಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. 

ಪ್ರಮೀಳಾ ನಾಥ್ (45) ಹಾಗೂ ಅವರ ಪುತ್ರಿ ಸತ್ಯಪ್ರಿಯಾ (22) ಸೆಪ್ಟಂಬರ್ 19ರಂದು ನಾಪತ್ತೆಯಾಗಿದ್ದರು ಎಂದು ಉಪ ವಿಭಾಗೀಯ ಪೊಲೀಸ್ ಅಧಿಕಾರಿ ರಂಜನ್ ಕುಮಾರ್ ದೇ ಹೇಳಿದ್ದಾರೆ. ಅನಂತರ ಅವರ ಮೃತದೇಹದ ಗ್ರಾಮದ ಸಮೀಪದ ರಸ್ತೆ ಬದಿ ಪತ್ತೆಯಾಗಿದೆ. ಮೃತದೇಹಗಳ ಶವಪರೀಕ್ಷೆ ನಡೆಸಲಾಗಿದೆ ಹಾಗೂ ಮೃತದೇಹಗಳನ್ನು ಅವರ ಸಂಬಂಧಿಕರಿಗೆ ಹಸ್ತಾಂತರಿಸಲಾಗಿದೆ. ಸತ್ಯಪ್ರಿಯ ಗರ್ಭಿಣಿಯಾಗಿರುವುದು ಶವಪರೀಕ್ಷೆ ಸಂದರ್ಭ ತಿಳಿದು ಬಂದಿದೆ ಎಂದು ಅವರು ತಿಳಿಸಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಹಾಗೂ ಶಂಕಿತರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)