varthabharthi


ಕರ್ನಾಟಕ

ರಾಜ್ಯದಲ್ಲಿ ಹೊಸದಾಗಿ 6,997 ಮಂದಿಗೆ ಕೊರೋನ ದೃಢ: ಸೋಂಕಿತರ ಸಂಖ್ಯೆ 5.40 ಲಕ್ಷಕ್ಕೆ ಏರಿಕೆ

ವಾರ್ತಾ ಭಾರತಿ : 23 Sep, 2020

ಬೆಂಗಳೂರು, ಸೆ.23: ರಾಜ್ಯದಲ್ಲಿ ಬುಧವಾರ 6,997 ಹೊಸ ಕೊರೋನ ಪ್ರಕರಣಗಳು ದೃಢವಾಗಿವೆ. 38 ಜನರು ಸೋಂಕಿಗೆ ಬಲಿಯಾಗಿದ್ದು, 5,460 ಜನರು ಗುಣಮುಖರಾಗಿದ್ದಾರೆ.

ಈಗಾಗಲೇ ಒಟ್ಟು ಸೋಂಕಿತರ ಸಂಖ್ಯೆ 5,40,847ಕ್ಕೆ ತಲುಪಿದ್ದು, 816 ಜನ ಸೋಂಕಿತರು ಐಸಿಯುನಲ್ಲಿದ್ದಾರೆ.

ಇಲ್ಲಿಯವರೆಗೆ ಒಟ್ಟು ಸಾವಿನ ಸಂಖ್ಯೆ 8,266ಕ್ಕೆ ತಲುಪಿದ್ದು, ಅನ್ಯ ಕಾರಣದಿಂದ 19 ಜನರು ಸಾವನ್ನಪ್ಪಿದ್ದಾರೆ. ಒಟ್ಟು ಸಕ್ರಿಯ ಕೊರೋನ ಪ್ರಕರಣಗಳ ಸಂಖ್ಯೆ 94,652ಕ್ಕೆ ಏರಿಕೆಯಾಗಿದ್ದು, ಇವರೆಲ್ಲ ಸೋಂಕಿತರು ಆಸ್ಪತ್ರೆ, ಕೊರೋನ ಕೇರ್ ಸೆಂಟರ್ ಹಾಗೂ ಮನೆಗಳಲ್ಲಿ ಚಿಕಿತ್ಸೆ ಮತ್ತು ಆರೈಕೆಯಲ್ಲಿದ್ದಾರೆ.

38 ಸೋಂಕಿತರು ಬಲಿ: ಬೆಂಗಳೂರು ಗ್ರಾಮಾಂತರ 6, ಬೆಂಗಳೂರು ನಗರ 23, ಶಿವಮೊಗ್ಗ 7, ವಿಜಯಪುರ ಜಿಲ್ಲೆಯಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ.  

ಎಲ್ಲೆಲ್ಲಿ ಎಷ್ಟು: ರಾಜ್ಯದಲ್ಲಿ ಹೊಸದಾಗಿ 6,997 ಪ್ರಕರಣಗಳು ದೃಢವಾಗಿದ್ದು, ಅದರಲ್ಲಿ ಬಾಗಲಕೋಟೆ 50, ಬಳ್ಳಾರಿ 192, ಬೆಳಗಾವಿ 191, ಬೆಂಗಳೂರು ಗ್ರಾಮಾಂತರ 128, ಬೆಂಗಳೂರು ನಗರ 3,547, ಬೀದರ್ 63, ಚಾಮರಾಜನಗರ 32, ಚಿಕ್ಕಬಳ್ಳಾಪುರ 84, ಚಿಕ್ಕಮಗಳೂರು 252, ದಕ್ಷಿಣ ಕನ್ನಡ 186, ದಾವಣಗೆರೆ 138, ಧಾರವಾಡ 120, ಗದಗ 59, ಹಾಸನ 315, ಹಾವೇರಿ 32, ಕಲಬುರ್ಗಿ 100, ಕೊಡಗು 33, ಕೋಲಾರ 44, ಕೊಪ್ಪಳ 88, ಮಂಡ್ಯ 203, ಮೈಸೂರು 341, ರಾಯಚೂರು 37, ರಾಮನಗರ 57, ಶಿವಮೊಗ್ಗ 187, ತುಮಕೂರು 90, ಉಡುಪಿ 102, ಉತ್ತರ ಕನ್ನಡ 115, ವಿಜಯಪುರ 82, ಯಾದಗಿರಿ ಜಿಲ್ಲೆಯಲ್ಲಿ 40 ಪ್ರಕರಣಗಳು ಪತ್ತೆಯಾಗಿವೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)