varthabharthi


ಕ್ರೀಡೆ

ಆಸ್ಟ್ರೇಲಿಯದ ಕ್ರಿಕೆಟ್ ದಂತಕತೆ ಡೀನ್ ಜೋನ್ಸ್ ನಿಧನ

ವಾರ್ತಾ ಭಾರತಿ : 24 Sep, 2020

ಮುಂಬೈ, ಸೆ.24: ಆಸ್ಟ್ರೇಲಿಯದ ಮಾಜಿ ಕ್ರಿಕೆಟ್ ದಂತಕತೆ ಡೀನ್ ಜೋನ್ಸ್ ಮುಂಬೈನಲ್ಲಿ ತೀವ್ರ ಹೃದಯಾಘಾತದಿಂದ ನಿಧನರಾದರು. ಅವರಿಗೆ 59 ವರ್ಷ ವಯಸ್ಸಾಗಿತ್ತು

ಸ್ಟಾರ್ ಸ್ಪೋಟ್ಸ್ ನ ವೀಕ್ಷಕವಿವರಣೆ ತಂಡದಲ್ಲಿದ್ದ ಜೋನ್ಸ್ ಬಯೋ ಸೆಕ್ಯೂರಿ ಇರುವ ಮುಂಬೈನ ಸೆವೆನ್ ಸ್ಟಾರ್ ಹೊಟೇಲ್ ನಲ್ಲಿ ವಾಸ್ತವ್ಯ ಹೂಡಿದ್ದರು.  ಗುರುವಾರ ಬೆಳಗ್ಗೆ ಬ್ರೆಟ್ ಲೀ ಹಾಗೂ ಇನ್ನೋರ್ವ ವೀಕ್ಷಕವಿವರಣೆಗಾರ ನಿಖಿಲ್ ಚೋಪ್ರಾ ಅವರೊಂದಿಗೆ ಉಪಹಾರ ಸೇವಿಸಿದ್ದರು, ಅಸ್ತಸ್ಥರಾಗಿದ್ದ ಜೋನ್ಸ್ ಗೆ ಲೀ ಸಿಪಿಆರ್ ನೀಡಲು ಯತ್ನಿಸಿದರೂ ಫಲಕಾರಿಯಾಗಲಿಲ್ಲ. ಹೊಟೇಲ್ ನಲ್ಲಿ ಇರುವಾಗಲೇ ಜೋನ್ಸ್ ಅವರಿಗೆ  ಹೃದಯಾಘಾತವಾಗಿತ್ತು.

ಜೋನ್ಸ್ ಸಕ್ರಿಯ ಕ್ರಿಕೆಟ್ ವಿಶ್ಲೇಷಕರಾಗಿದ್ದು, ಈಗ ಯುಎಇನಲ್ಲಿ ನಡೆಯುತ್ತಿರುವ ಐಪಿಎಲ್ ಟೂರ್ನಿಯ  ಕಾಮೆಂಟೆರಿ ನಡೆಸಿಕೊಡುವುದಕ್ಕೆ ಒಪ್ಪಂದ ಮಾಡಿಕೊಂಡಿದ್ದರು.

ಭಾರತೀಯ ಮಾಧ್ಯಮದಲ್ಲಿ ಜೋನ್ಸ್ ಚಿರಪರಿಚಿತ ಮುಖವಾಗಿದ್ದು, ಎನ್ ಡಿಟಿವಿಯ ಪ್ರೊ ಡೀನೊ ಬಹಳಷ್ಟು ಜನಪ್ರಿಯತೆ ಪಡೆದಿತ್ತು.

ಮೆಲ್ಬೋರ್ನ್ ನಲ್ಲಿ ಜನಿಸಿರುವ ಜೋನ್ಸ್ ಆಸ್ಟ್ರೇಲಿಯದ ಪರವಾಗಿ 52 ಟೆಸ್ಟ್ ಪಂದ್ಯಗಳನ್ನು ಆಡಿದ್ದು, 3,631 ರನ್ ಗಳಿಸಿದ್ದಾರೆ. 216 ರನ್ ಗರಿಷ್ಠ ವೈಯಕ್ತಿಕ ಸ್ಕೋರಾಗಿದೆ. ಜೋನ್ಸ್ 11 ಶತಕಗಳನ್ನು ಗಳಿಸಿದ್ದು, ಅಲನ್ ಬಾರ್ಡರ್ ತಂಡದಲ್ಲಿನ ಪ್ರಮುಖ ಸದಸ್ಯರಾಗಿದ್ದರು. ಜೋನ್ಸ್ 164 ಏಕದಿನ ಪಂದ್ಯಗಳನ್ನೂಆಡಿದ್ದು, 6,068 ರನ್ ಗಳಿಸಿದ್ದಾರೆ. ಇದರಲ್ಲಿ 7 ಶತಕ ಹಾಗೂ 46 ಅರ್ಧಶತಕಗಳಿವೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)