varthabharthi


ರಾಷ್ಟ್ರೀಯ

ಅಸ್ಸಾಂ ಮಾಜಿ ಸಿಎಂ ತರುಣ್ ಗೊಗೊಯ್ ಐಸಿಯುಗೆ ದಾಖಲು

ವಾರ್ತಾ ಭಾರತಿ : 24 Sep, 2020

ಹೊಸದಿಲ್ಲಿ, ಸೆ.24: ಹಿರಿಯ ಕಾಂಗ್ರೆಸ್ ಮುಖಂಡ ಹಾಗೂ ಅಸ್ಸಾಂನ ಮಾಜಿ ಮುಖ್ಯಮಂತ್ರಿ ತರುಣ್ ಗೊಗೊಯ್ ಅವರನ್ನು ಆಮ್ಲಜನಕದ ಶುದ್ಧತೆ ಮಟ್ಟ ಕುಸಿದ ಹಿನ್ನೆಲೆಯಲ್ಲಿ ಗುವಾಹಟಿ ವೈದ್ಯಕೀಯ ಕಾಲೇಜು ಆಸ್ಪತ್ರೆಯ ತೀವ್ರ ನಿಗಾ ಘಟಕಕ್ಕೆ(ಐಸಿಯು)ದಾಖಲಿಸಲಾಗಿದೆ. ಅವರು ಕಳೆದ ತಿಂಗಳು ಕೊರೋನ ವೈರಸ್ ಸೋಂಕಿಗೆ ಒಳಗಾಗಿದ್ದರು.

ಆಸ್ಪತ್ರೆಯ ಖಾಸಗಿ ಕ್ಯಾ ಬಿನ್ ನಲ್ಲಿ ದಾಖಲಾದ 85ರ ವಯಸ್ಸಿನ ಗೊಗೊಯ್ ಅವರನ್ನು ಪರಿಣಾಮಕಾರಿ ಮೇಲ್ಚಿಚಾರಣೆಗಾಗಿ ಐಸಿಯುಗೆ ದಾಖಲಿಸಲಾಗಿದೆ. ಅವರ ಸ್ಥಿತಿ ಈಗ ಸ್ಥಿರವಾಗಿದೆ ಎಂದು ತಿಳಿದುಬಂದಿದೆ.  2001 ರಿಂದ 2016ರ ತನಕ ಸತತ ಮೂರು ಬಾರಿ ಅಸ್ಸಾಂ ಸಿಎಂ ಆಗಿದ್ದ ಗೊಗೊಯ್ ಗೆ ಆಗಸ್ಟ್ 26 ರಂದು ಕೊರೋನ ಇರುವುದು  ದೃಢಪಟ್ಟಿತ್ತು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)