ಅ.1ರಿಂದ ಆಯುಧ ಪರವಾನಿಗೆ ಸೇವೆಗೆ ಆನ್ಲೈನ್ ಅರ್ಜಿ
ಮಂಗಳೂರು, ಸೆ.25: ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಆಯುಧ ಪರವಾನಿಗೆಯ ಎಲ್ಲ ಸೇವೆಗಳಿಗೆ ಅಕ್ಟೋಬರ್ 1ರಿಂದ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
ಅರ್ಜಿ ಸಲ್ಲಿಸಲು ಇಚ್ಛಿಸುವವರು www.mha.gov.inಗೆ ಲಾಗಿನ್ ಆಗಿ SERVICES > ARMS LICENCEONLINE PORTALಗೆ ಹೋಗಿ ಕಡ್ಡಾಯವಾಗಿ UIN ಸಂಖ್ಯೆಯನ್ನು ಹಾಕಿ ಆಯುಧಗಳ ಪರವಾನಿಗೆ ಸೇವೆ ಪಡೆದುಕೊಳ್ಳಬಹುದು.
ಹೆಚ್ಚಿನ ಮಾಹಿತಿಗೆ ದೂ.ಸಂ.: 0824-2220603ಗೆ ಕರೆ ಮಾಡಬಹುದು ಎಂದು ನಗರ ಪೊಲೀಸ್ ಆಯುಕ್ತ ವಿಕಾಸ್ ಕುಮಾರ್ ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Next Story