varthabharthi


ಕರಾವಳಿ

ತಲೆಯಲ್ಲಿದ್ದ ಮೂಟೆ ಬಿದ್ದು ಮೃತ್ಯು

ವಾರ್ತಾ ಭಾರತಿ : 26 Sep, 2020

ಕಾರ್ಕಳ, ಸೆ.26: ಪಶು ಆಹಾರದ ಮೂಟೆಯನ್ನು ತಲೆಯಲ್ಲಿ ಹೊತ್ತು ಕೊಂಡು ಹೋಗುತ್ತಿದ್ದ ವ್ಯಕ್ತಿಯೊಬ್ಬರು ಕಾಲು ಜಾರಿ ಬಿದ್ದು ಮೃತಪಟ್ಟ ಬಗ್ಗೆ ವರದಿಯಾಗಿದೆ.

ಮೃತರನ್ನು ವೀರಯ್ಯ ಸಿದ್ದಯ್ಯ ಹೆಡಿಯಾಲ್ ಮಠ(30) ಎಂದು ಗುರುತಿಸ ಲಾಗಿದೆ. ಇವರು ಸೆ.23ರಂದು ಬೆಳಗ್ಗೆ ಹಿರ್ಗಾನ ಗ್ರಾಮದ ಚಿಕ್ಕಾಲ್ಬೆಟ್ಟು ಸೊಸೈಟಿಯ ಒಳಗಡೆ ಪಶು ಆಹಾರದ ಮೂಟೆಯನ್ನು ತಲೆಯಲ್ಲಿ ಹೊತ್ತು ಕೊಂಡು ಹೋಗುತ್ತಿರುವಾಗ ಕಾಲು ಜಾರಿ ಬಿದ್ದರೆನ್ನ ಲಾಗಿದೆ. ಇದರ ಪರಿ ಣಾಮ ತಲೆಯಲ್ಲಿದ್ದ ಮೂಟೆ ಕುತ್ತಿಗೆಯ ಮೇಲೆ ಬಿದ್ದು ಕುತ್ತಿಗೆಯ ಮೂಳೆ ಮುರಿತಕ್ಕೆ ಒಳಗಾಗಿತ್ತೆಂದು ತಿಳಿದುಬಂದಿದೆ.

ಮಣಿಪಾಲ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಇವರು ಚಿಕಿತ್ಸೆಗೆ ಸ್ಪಂದಿಸದೆ ಸೆ.25ರಂದು ರಾತ್ರಿ 7:30 ಗಂಟೆಗೆ ಮೃತಪಟ್ಟಿದ್ದಾರೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)