varthabharthi


ಕ್ರೀಡೆ

ಮಿಂಚಿದ ಶುಭಮನ್ ಗಿಲ್: ಹೈದರಾಬಾದ್ ವಿರುದ್ಧ ಕೆಕೆಆರ್ ಗೆ 7 ವಿಕೆಟ್ ಗಳ ಗೆಲುವು

ವಾರ್ತಾ ಭಾರತಿ : 26 Sep, 2020

Photo: Twitter

ಅಬುಧಾಬಿ, ಸೆ.26: ಆರಂಭಿಕ ಆಟಗಾರ ಶುಭಮನ್ ಗಿಲ್ ಆಕರ್ಷಕ ಅರ್ಧಶತಕದ ನೆರವಿನಿನಿಂದ ಕೊಲ್ಕತ್ತಾ ನೈಟ್ ರೈಡರ್ಸ್ ತಂಡವು ಸನ್ ರೈಸಸ್ ಹೈದರಬಾದ್ ತಂಡದ ವಿರುದ್ಧ ಐಪಿಎಲ್ ಟ್ವೆಂಟಿ-20 ಟೂರ್ನಿಯ 8ನೇ ಪಂದ್ಯದಲ್ಲಿ 7 ವಿಕೆಟ್ ಗಳ ಗೆಲುವು ದಾಖಲಿಸಿದೆ.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ ಸನ್ ರೈಸಸ್ ಹೈದರಬಾದ್ ತಂಡ ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್‌ಗಳ ನಷ್ಟಕ್ಕೆ 142 ರನ್ ಗಳಿಸಿತು. ತಂಡದ ಪರ ಮನೀಶ್ ಪಾಂಡೆ 51 ರನ್ ಬಾರಿಸಿದರು. ಗುರಿ ಬೆನ್ನತ್ತಿದ್ದ ನೈಟ್ ರೈಡರ್ಸ್ ತಂಡಕ್ಕೆ ಆರಂಭಿಕ ಆಟಗಾರ ಶುಭಮನ್ ಗಿಲ್ ಆಸರೆಯಾದರು. ಅವರು 62 ಎಸೆತಗಳಲ್ಲಿ 70 ರನ್ ಗಳಿಸಿ ತಂಡದ ಗೆಲುವಿಗೆ ಕಾರಣರಾದರು. ಇಯಾನ್ ಮಾರ್ಗನ್ 42 ರನ್ ಹಾಗೂ ನಿತೀಶ್ ರಾಣಾ 26 ರನ್ ಗಳಿಸಿ ಮಿಂಚಿದರು. 

ಹೈದರಬಾದ್ ಪರ ರಶೀದ್ ಖಾನ್, ನಟರಾಜನ್, ಖಲೀಲ್ ಅಹ್ಮದ್ ತಲಾ ಒಂದು ವಿಕೆಟ್ ಪಡೆದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)