varthabharthi


ಝಲಕ್

ಭಾರತ!

ವಾರ್ತಾ ಭಾರತಿ : 30 Sep, 2020
-ಮಗು

 ಭಾರತದ ಚಿತ್ರವನ್ನು ಹರಿದು ಚೂರು ಮಾಡಿದ ತಂದೆ ಅದನ್ನು ಮಗನಿಗೆ ಕೊಟ್ಟು ‘‘ಇದನ್ನು ಮರು ಜೋಡಿಸು’’ ಎಂದರು.
ಚೂರಾಗಿರುವ ಭಾರತವನ್ನು ಜೋಡಿಸಲು ಆತ ಪ್ರಯತ್ನ ಪಟ್ಟ. ಯಾವುದು ಎಲ್ಲಿ ಜೋಡಿಸಬೇಕು ಎನ್ನುವುದು ಹೊಳೆಯಲಿಲ್ಲ.

ಅಷ್ಟರಲ್ಲಿ ಭೂಪಟದ ಚೂರೊಂದರ ಹಿಂದೆ ಮನುಷ್ಯನೊಬ್ಬನ ತಲೆ ಕಂಡಿತು. ಆ ತಲೆಗೆ ಭೂಪಟದ ಹಿಂಬದಿಯಲ್ಲಿರುವ ಒಂದೊಂದೇ ಮನುಷ್ಯನ ಭಾಗದ ಚೂರುಗಳನ್ನು ಜೋಡಿಸತೊಡಗಿದ. ಕುತ್ತಿಗೆ, ಕೈ, ಹೊಟ್ಟೆ, ಕಾಲು....ಹೀಗೆ ಸಂಪೂರ್ಣ ಮನುಷ್ಯನ ರೂಪ ಇದೀಗ ಜೋಡಣೆಯಾಯಿತು. ತಟ್ಟನೆ ಅವನಿಗೆ ಹೊಳೆಯಿತು...‘‘ಅದು ಸೂಟು ಬೂಟು ಹಾಕಿಕೊಂಡಿರುವ ಅಂಬೇಡ್ಕರ್ ಚಿತ್ರ’’ ಅಂಬೇಡ್ಕರ್ ಚಿತ್ರ ಪೂರ್ತಿಯಾಗುತ್ತಿದ್ದಂತೆಯೇ, ಚೂರಾಗಿದ್ದ ಭಾರತವೂ ಒಂದಾಯಿತು. ತಂದೆಗೆ ಜೋಡಿಸಿದ ಭಾರತವನ್ನು ತೋರಿಸಿದ. ಆತನಿಗೆ ಅಚ್ಚರಿ ‘‘ಇಷ್ಟು ಬೇಗ ಭಾರತವನ್ನು ಅದು ಹೇಗೆ ಜೋಡಿಸಿದೆ?’’
‘‘ಹಿಂಬದಿಯಲ್ಲಿರುವ ಅಂಬೇಡ್ಕರ್ ಚಿತ್ರವನ್ನು ಜೋಡಿಸಿದೆ. ಪೂರ್ಣ ಭಾರತ ನನಗೆ ಸಿಕ್ಕಿತು’’ ಮಗ ಉತ್ತರಿಸಿದ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)

ಇನ್ನಷ್ಟು ಝಲಕ್ ಸುದ್ದಿಗಳು