varthabharthi


ರಾಷ್ಟ್ರೀಯ

ಕೇಂದ್ರ ಸಚಿವ ರಾಮ ವಿಲಾಸ್ ಪಾಸ್ವಾನ್ ನಿಧನ

ವಾರ್ತಾ ಭಾರತಿ : 8 Oct, 2020

ಹೊಸದಿಲ್ಲಿ: ಇತ್ತೀಚೆಗಷ್ಟೇ ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ  ಕೇಂದ್ರ ಸಚಿವ ರಾಮವಿಲಾಸ್ ಪಾಸ್ವಾನ್ (74 ವರ್ಷ)ಗುರುವಾರ ದಿಲ್ಲಿ  ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ದೇಶದ ಪ್ರಮುಖ ದಲಿತ ನಾಯಕನಾಗಿರುವ ಪಾಸ್ವಾನ್  5 ದಶಕಗಳಿಗೂ ಅಧಿಕ ಸಮಯದಿಂದ ಸಕ್ರಿಯ ರಾಜಕಾರಣದಲ್ಲಿದ್ದರು.

ಪಾಪಾ.. ಈಗ ನೀವು ಈ ಜಗತ್ತಿನಲ್ಲಿ ಇಲ್ಲ. ಆದರೆ, ನೀವು ಯಾವಾಗಲೂ ನನ್ನ ಜೊತೆಯೇ ಇರುತ್ತೀರಿ ಎಂದು ನನಗೆ ಗೊತ್ತಿದೆ.. ಮಿಸ್ ಯೂ ಪಾಪಾ ಎಂದು …. ಎಂದು ಟ್ವೀಟ್ ಮಾಡಿರುವ ಲೋಕ ಜನಶಕ್ತಿ ಪಕ್ಷದ ಅಧ್ಯಕ್ಷ ಚಿರಾಗ್ ಪಾಸ್ವಾನ್  ಈ ಮೂಲಕ ತಂದೆಯ ನಿಧನ ಸುದ್ದಿಯನ್ನು ಟ್ವೀಟ್ ಮೂಲಕ ಬಹಿರಂಗಪಡಿಸಿದರು.

ಕಳೆದ ಕೆಲವು ವಾರಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಪಾಸ್ವಾನ್ ಕೇಂದ್ರ ಸರಕಾರದಲ್ಲಿ ಗ್ರಾಹಕ ವ್ಯವಹಾರ, ಆಹಾರ ಹಾಗೂ ಸಾರ್ವಜನಿಕ ವಿತರಣಾ ಸಚಿವರಾಗಿದ್ದರು.

ಪಾಸ್ವಾನ್ ಬಿಹಾರದ ಖಗಾರಿಯಾದಲ್ಲಿ ಜುಲೈ 5,1946ರಲ್ಲಿ ಜನಿಸಿದ್ದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)