varthabharthi


ಕರ್ನಾಟಕ

ರಾಜ್ಯದಲ್ಲಿ ಹೊಸದಾಗಿ 10,704 ಕೊರೋನ ಪ್ರಕರಣ ದೃಢ; 101 ಮಂದಿ ಸಾವು

ವಾರ್ತಾ ಭಾರತಿ : 8 Oct, 2020

ಬೆಂಗಳೂರು, ಅ.8: ರಾಜ್ಯದಲ್ಲಿ ಗುರುವಾರ 10,704 ಹೊಸ ಕೊರೋನ ಪ್ರಕರಣಗಳು ದೃಢವಾಗಿವೆ. 101 ಜನರು ಸೋಂಕಿಗೆ ಬಲಿಯಾಗಿದ್ದು, 9,613 ಜನರು ಗುಣಮುಖರಾಗಿದ್ದಾರೆ.  ಈಗಾಗಲೇ ಒಟ್ಟು ಸೋಂಕಿತರ ಸಂಖ್ಯೆ 6,79,356ಕ್ಕೆ ತಲುಪಿದ್ದು, 853 ಜನ ಸೋಂಕಿತರು ಐಸಿಯುನಲ್ಲಿದ್ದಾರೆ.

ಇಲ್ಲಿಯವರೆಗೆ ಒಟ್ಟು ಸಾವಿನ ಸಂಖ್ಯೆ 9,675ಕ್ಕೆ ತಲುಪಿದ್ದು, ಗುರುವಾರ ಅನ್ಯ ಕಾರಣದಿಂದ 19 ಮಂದಿ ಸಾವನ್ನಪ್ಪಿದ್ದಾರೆ. ಒಟ್ಟು ಸಕ್ರಿಯ ಕೊರೋನ ಪ್ರಕರಣ ಸಂಖ್ಯೆ 1,17,143ಕ್ಕೆ ಏರಿಕೆಯಾಗಿದ್ದು, ಇವರೆಲ್ಲ ಸೋಂಕಿತರು ಆಸ್ಪತ್ರೆ, ಕೊರೋನ ಕೇರ್ ಸೆಂಟರ್ ಹಾಗೂ ಮನೆಗಳಲ್ಲಿ ಚಿಕಿತ್ಸೆ ಮತ್ತು ಆರೈಕೆಯಲ್ಲಿದ್ದಾರೆ. 

101 ಸೋಂಕಿತರು ಬಲಿ: ಬಾಗಲಕೋಟೆ 3, ಬಳ್ಳಾರಿ 3, ಬೆಂಗಳೂರು ಗ್ರಾಮಾಂತರ 1,  ಬೆಂಗಳೂರು ನಗರ 43, ಚಾಮರಾಜನಗರ 1, ಚಿಕ್ಕಮಗಳೂರು 1, ದಕ್ಷಿಣ ಕನ್ನಡ 6,  ಧಾರವಾಡ 2, ಹಾಸನ 2, ಕಲಬುರಗಿ 5, ಕೋಲಾರ 5, ಮಂಡ್ಯ 2, ಮೈಸೂರು 12, ರಾಯಚೂರು 1, ರಾಮನಗರ 1, ಶಿವಮೊಗ್ಗ 2, ತುಮಕೂರು 5, ಉಡುಪಿ 1, ಉತ್ತರ ಕನ್ನಡ 2, ವಿಜಯಪುರ 1, ಯಾದಗಿರಿ ಜಿಲ್ಲೆಯಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ.   

ಎಲ್ಲೆಲ್ಲಿ ಎಷ್ಟು: ರಾಜ್ಯದಲ್ಲಿ ಹೊಸದಾಗಿ 10,704 ಪ್ರಕರಣಗಳು ದೃಢವಾಗಿದ್ದು, ಅದರಲ್ಲಿ ಬಾಗಲಕೋಟೆ 98, ಬಳ್ಳಾರಿ 248, ಬೆಳಗಾವಿ 185, ಬೆಂಗಳೂರು ಗ್ರಾಮಾಂತರ 368, ಬೆಂಗಳೂರು ನಗರ 5,121, ಬೀದರ್ 27, ಚಾಮರಾಜನಗರ 68, ಚಿಕ್ಕಬಳ್ಳಾಪುರ 100, ಚಿಕ್ಕಮಗಳೂರು 142, ಚಿತ್ರದುರ್ಗ 215, ದಕ್ಷಿಣ ಕನ್ನಡ 296, ದಾವಣಗೆರೆ 238, ಧಾರವಾಡ 121, ಗದಗ 42, ಹಾಸನ 441, ಹಾವೇರಿ 108, ಕಲಬುರ್ಗಿ 128, ಕೊಡಗು 94, ಕೋಲಾರ 129, ಕೊಪ್ಪಳ 97, ಮಂಡ್ಯ 206, ಮೈಸೂರು 642, ರಾಯಚೂರು 111, ರಾಮನಗರ 91, ಶಿವಮೊಗ್ಗ 250, ತುಮಕೂರು 509, ಉಡುಪಿ 239, ಉತ್ತರ ಕನ್ನಡ 213, ವಿಜಯಪುರ 110, ಯಾದಗಿರಿ ಜಿಲ್ಲೆಯಲ್ಲಿ 67 ಪ್ರಕರಣಗಳು ಪತ್ತೆಯಾಗಿವೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)