varthabharthi


ರಾಷ್ಟ್ರೀಯ

ಗುಜರಾತ್: ತನಿಷ್ಕ್ ಜ್ಯುವೆಲ್ಲರಿ ಮ್ಯಾನೇಜರ್‌ರಿಂದ ಕ್ಷಮೆಯಾಚನೆ ಪತ್ರ

ವಾರ್ತಾ ಭಾರತಿ : 14 Oct, 2020

ಅಹ್ಮದಾಬಾದ್: ಇತ್ತೀಚೆಗೆ ಜಾಹೀರಾತಿನ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸುದ್ದಿಯಾಗಿದ್ದ ಖ್ಯಾತ ಜ್ಯುವೆಲ್ಲರಿ ಬ್ರಾಂಡ್ ತನಿಷ್ಕ್ ಮಳಿಗೆಯ ಮ್ಯಾನೇಜರ್ ಕ್ಷಮೆಯಾಚಿಸುವ ಪತ್ರವನ್ನು ಬರೆಯುವಂತೆ ಮಾಡಲಾಗಿದೆ ಮೂಲಗಳು ತಿಳಿಸಿವೆ.

ಜಾತ್ಯತೀತ ಜಾಹೀರಾತನ್ನು ಪ್ರಸಾರ ಮಾಡುವ ಮೂಲಕ ಹಿಂದೂಗಳ ಭಾವನೆಯನ್ನು ನೋಯಿಸಿದ್ದಕ್ಕಾಗಿ ಕಚ್ ಜಿಲ್ಲೆಯ ಜನರಲ್ಲಿ ಕ್ಷಮೆಯಾಚಿಸುತ್ತೇವೆ ಎಂದು ಗಾಂಧಿ ಧಾಮ್‌ನಲ್ಲಿರುವ ತನಿಷ್ಕ್ ಚಿನ್ನಾಭರಣ ಅಂಗಡಿಯ ವ್ಯವಸ್ಥಾಪಕರು ಕ್ಷಮೆಯಾಚಿಸುವ ಪತ್ರದಲ್ಲಿ ಬರೆದಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಹಿಂದೂ-ಮುಸ್ಲಿಂ ಐಕ್ಯತೆಯನ್ನು ಎತ್ತಿ ತೋರಿಸುವ ತನಿಷ್ಕ್ ಜಾಹೀರಾತನ್ನು ಬಹಿಷ್ಕರಿಸಬೇಕೆಂಬ ಕೂಗು ಸಾಮಾಜಿಕ ಜಾಲತಾಣದಲ್ಲಿ ಕೇಳಿಬಂದಿತ್ತು. 45 ಸೆಕೆಂಡ್ ಅವಧಿಯ ತನಿಷ್ಕ್ ಜಾಹೀರಾತಿನ ವೀಡಿಯೊವನ್ನು ಟಾಟಾ ಸಮೂಹ ಕಂಪೆನಿ ಹಿಂದಕ್ಕೆ ಪಡೆದಿತ್ತು. ಜಾಹೀರಾತಿನ ಬಗ್ಗೆ ಪರ-ವಿರೋಧಗಳು ವ್ಯಕ್ತವಾಗಿದ್ದವು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)