varthabharthi


ಕರಾವಳಿ

ನಾಡಿನ ಜನತೆಗೆ ನವರಾತ್ರಿ ಹೊಸ ಚೈತನ್ಯ ನೀಡಲಿ: ಡಾ.ಆರತಿ ಕೃಷ್ಣ

​ಮಂಗಳೂರು ದಸರಾಕ್ಕೆ ಚಾಲನೆ

ವಾರ್ತಾ ಭಾರತಿ : 17 Oct, 2020

ಮಂಗಳೂರು, ಅ.17: ನವರಾತ್ರಿ ನಾಡಿನ ಜನತೆಗೆ ಹೊಸ ಚೈತನ್ಯ ನೀಡಲಿ ಎಂದು ಎನ್‌ಆರ್‌ಐ ಪೋರಂನ ಮಾಜಿ ಉಪಾಧ್ಯಕ್ಷೆ ಕೋವಿಡ್ ಯೋಧರಾದ ಡಾ.ಆರತಿಕೃಷ್ಣ ಎಂದು ಹಾರೈಸಿದ್ದಾರೆ.

ಅವರು ಇಂದು ನಗರದ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ನವರಾತ್ರಿ ಉತ್ಸವದ ಮಂಗಳೂರು ದಸರಾ ಉತ್ಸವಕ್ಕೆ ಚಾಲನೆ ನೀಡಿ ಮಾತನಾಡುತ್ತಿದ್ದರು.

ಕೋವಿಡ್-19 ನಡುವೆ ಕುದ್ರೋಳಿಯಲ್ಲಿ ಶಿಸ್ತುಬದ್ಧ ರೀತಿ ಯಲ್ಲಿ ಕೋವಿಡ್ ನಿಯಮಗಳನ್ನು ಪಾಲಿಸಿಕೊಂಡು ನವರಾತ್ರಿ ಉತ್ಸವವನ್ನು ಜನಾರ್ದನ ಪೂಜಾರಿಯವರಂತಹ ಹಿರಿಯ ಮಾರ್ಗ ದರ್ಶನದಲ್ಲಿ ನಡೆಯುತ್ತಿರುವುದು ಶ್ಲಾಘನೀಯ. ಕುದ್ರೋಳಿ ದೇವಸ್ಥಾನದಲ್ಲಿ ಮಹಿಳೆಯರಿಗೆ, ವಿಧವೆಯರಿಗೆ ಮಹತ್ವದ ಸ್ಥಾನ ನೀಡಿರುವ ಕ್ರಾಂತಿಕಾರಿ ನಿರ್ಧಾರಗಳಿಂದ ದೇಶ ವಿದೇಶದಲ್ಲೂ ಖ್ಯಾತಿ ಪಡೆದಿದೆ. ದಸರಾ ನಾಡಿನ ಎಲ್ಲಾ ಜನತೆಗೆ ಮತ್ತೆ ಆರ್ಥಿಕ ಸುಖ ಸಮೃದ್ಧಿಯನ್ನು ನೀಡಲಿ ಎಂದು ಶುಭ ಹಾರೈಸಿದರು.

ಉದ್ಯೋಗಕ್ಕೆ ತೆರಳುವ ಅನಿವಾಸಿ ಭಾರತೀಯರಿಗೆ ನೆರವಿನ ಅಗತ್ಯವಿದೆ:
ಕೋವಿಡ್ ಸಂದರ್ಭದಲ್ಲಿ ವಿದೇಶದಲ್ಲಿ ಸಂಕಷ್ಟದಲ್ಲಿದ್ದ ಸಾಕಷ್ಟು ಭಾರತೀಯರಿಗೆ ನೆರವು ನೀಡಲು ಸಾಧ್ಯವಾಗಿದೆ. ಇದೀಗ ಮತ್ತೆ ವಿದೇಶಕ್ಕೆ ಉದ್ಯೋಗಕ್ಕೆ ತೆರಳುವ ಭಾರತೀಯರಿಗೆ ಸರಕಾರ ನೆರವಾಗಬೇಕಾಗಿದೆ. ಈ ಬಗ್ಗೆ ಕೇಂದ್ರ ಸರಕಾರದ ನಾಗರಿಕ ವಿಮಾನಯಾನ ಸಚಿವರೊಂದಿಗೆ ಸಮಾಲೋಚನೆ ನಡೆಸುವ ಉದ್ದೇಶ ಹೊಂದಿರುವುದಾಗಿ ಡಾ.ಆರತಿಕೃಷ್ಣ ತಿಳಿಸಿದ್ದಾರೆ.

*ನವರಾತ್ರಿ ಉತ್ಸವ-ಮಂಗಳೂರು ಉತ್ಸವಕ್ಕೆ ಚಾಲನೆ:
 ಕುದ್ರೋಳಿ ಕ್ಷೇತ್ರದಲ್ಲಿ ನವದು ರ್ಗೆಯರ ಪ್ರತಿಷ್ಠಾಪನೆಯೊಂದಿಗೆ ಇಂದು ಮಂಗಳೂರು ಉತ್ಸವಕ್ಕೆ ಡಾ.ಆರತಿಕೃಷ್ಣ ದೀಪ ಬೆಳಗಿಸಿ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಕ್ಷೇತ್ರಾಡಳಿತ ಸಮಿತಿಯ ಅಧ್ಯಕ್ಷ ಎಚ್.ಎಸ್.ಸಾಯಿರಾಮ್ ಹಾಗೂ ಆಡಳಿತ ಸಮಿತಿಯ ಪದಾಧಿಕಾರಿಗಳಾದ ಪದ್ಮರಾಜ್, ವಿಧಾನ ಪರಿಷತ್ ಸದಸ್ಯ ಹರೀಶ್‌ಕುಮಾರ್, ಕಿಯೋನಿಸ್ಕ್ ಆಡಳಿತ ನಿರ್ದೇಶದ ಹರಿಕೃಷ್ಣ ಬಂಟ್ವಾಳ್, ಮನಪಾ ಸದಸ್ಯ ಅನಿಲ್ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)