varthabharthi


ಸಿನಿಮಾ

ಯೋಗರಾಜ್ ಭಟ್‌ರ ಸಿನಿ ಗರಡಿಯಲ್ಲಿ ಆಳ್ವಾಸ್ ಕಾಲೇಜಿನ ಇಂಜಿನಿಯರಿಂಗ್ ವಿದ್ಯಾರ್ಥಿನಿ

‘ಪದವಿ ಪೂರ್ವ’ ಸಿನೆಮಾ ಮೂಲಕ ನಾಯಕಿಯಾಗಲಿರುವ ಯಶಾ ಶಿವಕುಮಾರ್

ವಾರ್ತಾ ಭಾರತಿ : 17 Oct, 2020

ಮಂಗಳೂರು, ಅ.17: ಕನ್ನಡದ ಖ್ಯಾತ ಸಿನೆಮಾ ನಿರ್ದೇಶಕರಲ್ಲಿ ಒಬ್ಬರಾಗಿರುವ ಯೋಗರಾಜ್ ಭಟ್ ನಿರ್ಮಾಣದ ಹೊಸ ಚಿತ್ರದಲ್ಲಿ ಮೂಡುಬಿದಿರೆ ಆಳ್ವಾಸ್ ಕಾಲೇಜಿನ ಇಂಜಿನಿಯರಿಂಗ್ ವಿದ್ಯಾರ್ಥಿನಿ ಯಶಾ ಶಿವಕುಮಾರ್ ಸಿನಿ ಲೋಕವನ್ನು ಪ್ರವೇಶಿಸಲು ಸಜ್ಜಾಗಿದ್ದಾರೆ.

ಮಾಡೆಲಿಂಗ್ ಕ್ಷೇತ್ರದಲ್ಲಿ ಮಿಂಚುತ್ತಿರುವ ಯಶಾ ಶಿವಕುಮಾರ್ ಇದೀಗ ಹರಿಪ್ರಸಾದ್ ಜಯಣ್ಣ ನಿರ್ದೇಶನದ ‘ಪದವಿ ಪೂರ್ವ’ ಚಿತ್ರದ ಮೂಲಕ ನಾಯಕಿಯಾಗಿ ತೆರೆ ಮೇಲೆ ಬರಲಿದ್ದಾರೆ. ಈ ಚಿತ್ರವನ್ನು ಯೋಗರಾಜ್ ಭಟ್ ಮತ್ತು ರವಿ ಶಾಮನೂರ್ ಜಂಟಿಯಾಗಿ ನಿರ್ಮಿಸುತ್ತಿದ್ದಾರೆ.

ಯಶಾ ಅವರು 2019ರಲ್ಲಿ ಫ್ಯಾಶನ್ ಎಬಿಸಿಡಿ ಸಂಸ್ಥೆ ಆಯೋಜಿಸಿದ್ದ ‘ಮಿಸ್ ಬೆಂಗಳೂರು-2019, ಮಿಸ್ ಕರ್ನಾಟಕ ಇಂಟರ್‌ನ್ಯಾಶನಲ್-2019’ ಹಾಗೂ ಮುಂಬೈಯಲ್ಲಿ ನಡೆದ ‘ಮಿಸ್ ಗ್ಲೋರಿ ಆಫ್ ಗ್ಯಾಲಕ್ಸಿ-2019’ ಸಹಿತ ಹಲವು ಸ್ಪರ್ಧೆಗಳಲ್ಲಿ ಭಾಗವಹಿಸಿ ಫ್ಯಾಶನ್ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ. ಒಂದು ವರ್ಷದ ಮಾಡೆಲಿಂಗ್ ಹಾದಿ ಇದೀಗ ಯಶಾ ಅವರನ್ನು ಬೆಳ್ಳಿ ಪರದೆ ತನ್ನತ್ತ ಸೆಳೆದಿದೆ.  ‘ಪದವಿ ಪೂರ್ವ’ ಚಿತ್ರದ ಮೂಲಕ ಅದೃಷ್ಟ ಪರೀಕ್ಷೆಗೆ ಇಳಿದಿರುವ ಯಶಾ, ಚಿತ್ರೋದ್ಯಮದಲ್ಲಿ ಏನನ್ನಾದರೂ ಸಾಧಿಸುವ ಆಶಾಭಾವನೆ ಹೊಂದಿದ್ದಾರೆ.

‘ಪದವಿ ಪೂರ್ವ’ ಚಿತ್ರವು ಹದಿಹರೆಯದ ಮೋಜು, ಮಸ್ತಿ, ಮೋಹ, ಸ್ನೇಹವನ್ನು ಒಳಗೊಂಡ ಕಥೆ ಹೊಂದಿದೆ. ಯಶಾ ಶಿವಕುಮಾರ್ ಅವರಂತೆ ಚಿತ್ರದ ನಾಯಕ ಪೃಥ್ವಿ ಶಾಮನೂರ್ ಹಾಗೂ ಅಂಜಲಿ ಅನೀಶ್‌ಗೂ ಇದು ಚೊಚ್ಚಲ ಚಿತ್ರವಾಗಿದೆ. ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ಮತ್ತು ಸಂತೋಷ್ ರೈ ಪಾತಾಜೆ ಛಾಯಾಗ್ರಹಣ ಇರಲಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)