varthabharthi


ರಾಷ್ಟ್ರೀಯ

ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾದ ಪ್ರಪ್ರಥಮ ಚುನಾಯಿತ ಅಧ್ಯಕ್ಷರಾದ ಸೀಮಾ ಮುಸ್ತಫಾ

ವಾರ್ತಾ ಭಾರತಿ : 17 Oct, 2020

ಹೊಸದಿಲ್ಲಿ: ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾದ ಪ್ರಪ್ರಥಮ ಚುನಾಯಿತ ಅಧ್ಯಕ್ಷರಾಗಿ ಹಿರಿಯ ಪತ್ರಕರ್ತೆ, ದ ಸಿಟಿಝನ್ ವೆಬ್ ಸೈಟ್ ಸ್ಥಾಪಕಿ ಸೀಮಾ ಮುಸ್ತಫಾ ಆಯ್ಕೆಯಾಗಿದ್ದಾರೆ.

ದಿಲ್ಲಿ ಮೂಲದ ಹಾರ್ಡ್ ನ್ಯೂಸ್ ಮ್ಯಾಗಝಿನ್ ನ ಸಂಪಾದಕ ಸಂಜಯ್ ಕಪೂರ್ ಎಡಿಟರ್ಸ್ ಗಿಲ್ಡ್ ನ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದಾರೆ.

ಕಾರವಾನ್ ಮ್ಯಾಗಝಿನ್ ನ ಸಂಪಾದಕ ಅನಂತ್ ನಾಗ್ ಖಜಾಂಚಿಯಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಅಕ್ಟೋಬರ್ 16ರಂದು ಮತದಾನ ನಡೆದಿದ್ದರೆ, ಶನಿವಾರ ಫಲಿತಾಂಶ ಪ್ರಕಟವಾಗಿದೆ.

ನೂತನ ಪದಾಧಿಕಾರಿಗಳಿಗಾಗಿ ಚುನಾವಣೆ ನಡೆಸುವುದರೊಂದಿಗೆ ಗಿಲ್ಡ್ ಸಹಮತದ ಮಾರ್ಗದರ್ಶನ ಪಡೆಯುವ ತನ್ನ ಹಿಂದಿನ ಪರಿಪಾಠದಿಂದ ದೂರಸರಿದಂತಾಗಿದೆ.

ಗಿಲ್ಡ್‌ನ ಒಟ್ಟು 140 ಸದಸ್ಯರು ಮತಗಳನ್ನು ಚಲಾಯಿಸಿದ್ದು,ಮುಸ್ತಫಾ 87 ಮತಗಳನ್ನು ಪಡೆದಿದ್ದರೆ ಅವರ ಪ್ರತಿಸ್ಪರ್ಧಿಯಾಗಿದ್ದ ಎಂ.ಡಿ.ನಳಪತ್ ಅವರಿಗೆ 51 ಮತಗಳು ಲಭ್ಯವಾಗಿವೆ. ಪ್ರ.ಕಾರ್ಯದರ್ಶಿ ಹುದ್ದೆಗೆ ಸ್ಪರ್ಧಿಸಿದ್ದ ಎಎನ್‌ಐನ ಸ್ಮಿತಾ ಪ್ರಕಾಶ ಅವರು ಕಪೂರ್ ವಿರುದ್ಧ 40 ಮತಗಳ ಅಂತರದಿಂದ ಸೋತಿದ್ದಾರೆ.

ಕಾರವಾನ್‌ನ ಅನಂತನಾಥ ಅವರು ಖಜಾಂಜಿ ಹುದ್ದೆಗೆ ಕಣದಲ್ಲಿದ್ದ ಏಕೈಕ ಉಮೇದುವಾರರಾಗಿದ್ದರು.

ಗಿಲ್ಡ್ ಸಂಪಾದಕರ ಉನ್ನತ ಸಂಸ್ಥೆಯಾಗಿದ್ದು, ದೇಶದ ಮಾಧ್ಯಮಗಳ ಆತ್ಮಸಾಕ್ಷಿಯನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಶ್ರಮಿಸುತ್ತಿದೆ. ಅತಿರೇಕಗಳು ಮತ್ತು ದುರ್ಬಳಕೆಗಳಿಗಾಗಿ ಸರಕಾರಗಳನ್ನು ಟೀಕಿಸುವ ಮೂಲಕ ಆಡಳಿತದಲ್ಲಿರುವವರಿಗೆ ಸತ್ಯದರ್ಶನವನ್ನು ಮಾಡಿಸುವ ಕೆಲಸವನ್ನೂ ಅದು ನಿರ್ವಹಿಸುತ್ತಿದೆ.

ಚುನಾವಣೆಗೆ ಮುನ್ನ ಶೇಖರ ಗುಪ್ತಾ ಅವರು ಗಿಲ್ಡ್‌ನ ಅಧ್ಯಕ್ಷರಾಗಿದ್ದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)