varthabharthi


ಕ್ರೀಡೆ

ಕೊನೆಯ ಓವರ್ ನಲ್ಲಿ ಸಿಕ್ಸರ್ ಸುರಿಮಳೆಗೈದ ಅಕ್ಸರ್: ಚೆನ್ನೈ ವಿರುದ್ಧ ಡೆಲ್ಲಿಗೆ ಭರ್ಜರಿ ಜಯ

ವಾರ್ತಾ ಭಾರತಿ : 17 Oct, 2020

ಹೊಸದಿಲ್ಲಿ: ಚೆನ್ನೈ ಸೂಪರ್ ಕಿಂಗ್ಸ್ ನೀಡಿದ್ದ 179 ರನ್ ಗಳ ಗುರಿಯನ್ನು ಬೆನ್ನತ್ತಿದ ಡೆಲ್ಲಿ ಕ್ಯಾಪಿಟಲ್ಸ್ ಜಯಭೇರಿ ಬಾರಿಸಿದೆ. ಕೊನೆಯ ಓವರ್ ನಲ್ಲಿ ಅಕ್ಸರ್ ಪಟೇಲ್ ಸಿಡಿಸಿದ 3 ಸಿಕ್ಸರ್ ಗಳ ನೆರವಿನಿಂದ ಡೆಲ್ಲಿ ಗೆಲುವಿನ ನಗೆ ಬೀರಿದೆ.

ಡೆಲ್ಲಿ ಕ್ಯಾಪಿಟಲ್ಸ್ ಪರ ಶಿಖರ್ ಧವನ್ 58 ಎಸೆತಗಳಲ್ಲಿ 101 ರನ್ ಸಿಡಿಸಿದರು. ಇದರಲ್ಲಿ 1 ಸಿಕ್ಸರ್ ಮತ್ತು 14 ಬೌಂಡರಿಗಳು ಸೇರಿತ್ತು. ಕೊನೆಯ ಓವರ್ ನಲ್ಲಿ ಮಿಂಚಿದ ಅಕ್ಸರ್ ಪಟೇಲ್ 5 ಎಸೆತಗಳಲ್ಲಿ 3 ಸಿಕ್ಸರ್ ಗಳೊಂದಿಗೆ 21 ರನ್ ಸಿಡಿಸಿದರು.

ಸಿಎಸ್ ಕೆ ಪರ ಡು ಪ್ಲೆಸಿಸ್ 47 ಎಸೆತಗಳಲ್ಲಿ 58 ರನ್ ಗಳಿಸಿದರೆ, ಅಂಬಾಟಿ ರಾಯುಡು 25 ಎಸೆತಗಳಲ್ಲಿ 45 ರನ್ ಸಿಡಿಸಿದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)