varthabharthi


ಅಂತಾರಾಷ್ಟ್ರೀಯ

ಹಾಂಕಾಂಗ್: ಏರ್‌ಇಂಡಿಯಾ, ವಿಸ್ತಾರ ವಿಮಾನ ಸಂಚಾರ ನಿಷೇಧ

ವಾರ್ತಾ ಭಾರತಿ : 17 Oct, 2020

ಹಾಂಕಾಂಗ್,ಅ.17: ಕೆಲವು ಪ್ರಯಾಣಿಕರಲ್ಲಿ ಕೊರೋನ ಪಾಸಿಟಿವ್ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಹಾಂಕಾಂಗ್ ಭಾರತೀಯ ವಾಯುಯಾನ ಸಂಸ್ಥೆಗಳಾದ ಏರ್‌ಇಂಡಿಯಾ ಹಾಗೂ ವಿಸ್ತಾರ ವಿಮಾನಗಳ ಸಂಚಾರವನ್ನು ಅಕ್ಟೋಬರ್ 30ರವರೆಗೆ ನಿಷೇಧಿಸಿದೆ.

 ಕೊರೋನ ಸೋಂಕಿತ ಪ್ರಯಾಣಿಕರನ್ನು ಕರೆತಂದಿರುವುದಕ್ಕಾಗಿ ಹಾಂಕಾಂಗ್ ಸರಕಾರವು ಏರ್ ಇಂಡಿಯಾ ವಿಮಾನಗಳ ಹಾರಾಟವನ್ನು ನಿಷೇಧಿಸಿರುವುದು ಇದು ಮೂರನೇ ಸಲವಾಗಿದೆ. ಈ ಹಿಂದೆ ಸೆಪ್ಟೆಂಬರ್ 20ರಿಂದ ಅಕ್ಟೋಬರ್ 3 ತನಕ ಹಾಗೂ ಆಗಸ್ಟ್ 18ರಿಂದ ಆಗಸ್ಟ್ 31ರವರೆಗೆ ಏರ್ ಇಂಡಿಆ ವಿಮಾನಗಳ ಹಾರಾಟವನ್ನು ಹಾಂಕಾಂಗ್ ನಿಷೇಧಿಸಿತ್ತು. ಆದರೆ ಭಾರತದ ಖಾಸಗಿರಂಗದ ವಾಯುಯಾನಸಂಸ್ಥೆ ವಿಸ್ತಾರಾಕ್ಕೆ ಸೇರಿದ ವಿಮಾನಗಳ ಹಾರಾಟವನ್ನು ಅದು ರದ್ದುಪಡಿಸಿರುವುದು ಇದು ಮೊದಲ ಸಲವಾಗಿದೆ.

ಭಾರತದಿಂದ ಹಾಂಕಾಂಗ್‌ಗೆ ಆಗಮಿಸುವ ಪ್ರಯಾಣಿಕರು ತಮ್ಮ ಪ್ರಯಾಣಕ್ಕೆ 72 ತಾಸುಗಳ ಮಂಚಿತವಾಗಿ ನಡೆದ ಪರೀಕ್ಷೆಯಲ್ಲಿ ಕೋವಿಡ್-19 ನೆಗೆಟಿವ್ ಪ್ರಮಾಣಪತ್ರನ್ನು ಪಡೆದಲ್ಲಿ ಮಾತ್ರವೇ ಅವರಿಗೆ ಹಾಂಕಾಂಗ್ ಪ್ರವೇಶಕ್ಕೆ ಅನುಮತಿ ನೀಡಲಾಗುವುದೆಂದು ಸ್ಥಳೀಯ ಸರಕಾರದ ನಿಯಾಮವಳಿಗಳು ತಿಳಿಸಿವೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)